ಗ್ರಾಮ ಪಂಚಾಯತ್ ಚುನಾವಣೆಗೆ ಮತದಾನ ವೇಳಾ ಪಟ್ಟಿ ಪ್ರಕಟ
ಬೆಂಗಳೂರು: 2021 ಜೂನ್ ನಿಂದ 2022 ಮಾರ್ಚ್ ತಿಂಗಳೊಳಗೆ ಅವಧಿ ಮುಕ್ತಾಯವಾಗಲಿರುವ ಹಾಗೂ ಕಾರಣಾಂತರಗಳಿಂದ ಖಾಲಿ ಇರುವ, ತೆರವಾದ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗವು ಮತದಾನ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ.
ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆನಂತೆ ಚುನಾವಣೆ ಪ್ರಕ್ರಿಯೆ ಈ ಕೆಳಗಿನಂತೆ ಇರುತ್ತದೆ.
1. ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆ ಹೊರಡಿಸುವ ದಿನಾಂಕ: 13-12-2021
2. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 17-12-2021
3. ನಾಮಪತ್ರ ಪರಿಶೀಲಿಸುವ ದಿನಾಂಕ: 18-12-2021
4. ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ: 20-12-2021
5. ಮತದಾನ ನಡೆಯುವ ದಿನಾಂಕ: 27-12-2021
6. ಅವಶ್ಯವಿದ್ದರೆ ಮರುಮತದಾನ ನಡೆಯುವ ದಿನಾಂಕ: 29-12-2021
7. ಮತ ಎಣಿಕೆ ದಿನಾಂಕ: 30-12-2021