ಕ್ಲಾಸ್ ಹಾಜರಾಗದಿದ್ದಕ್ಕೆ ಪೋಷಕರಿಗೆ ಮಾಹಿತಿ; ಶಿಕ್ಷಕನಿಗೆ ಲಾಂಗ್ ತೋರಿಸಿದ ವಿದ್ಯಾರ್ಥಿ
ಮಂಡ್ಯ; ವಿದ್ಯಾರ್ಥಿಯೊಬ್ಬ ಕ್ಲಾಸ್‌ಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದುದನ್ನು ಉಪನ್ಯಾಸಕನೊಬ್ಬ ಆತನ ಪೋಷಕರಿಗೆ ತಿಳಿಸಿದ್ದೇ ತಪ್ಪಾಗಿದೆ. ಆಕ್ರೋಶಗೊಂಡ ವಿದ್ಯಾರ್ಥಿ ಲಾಂಗ್ ಹಿಡಿದೇ ಕ್ಲಾಸ್‌ಗೆ ಬಂದಿದ್ದಾರೆ. ಉಪನ್ಯಾಸಕನ ಮುಂದೆ ಲಾಂಗ್ ಝಳಪಿಸಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಘಟನೆ ನಡೆದಿರೋದು ಬೇರೆಲ್ಲೂ ಅಲ್ಲ. ಮಂಡ್ಯ ಜಿಲ್ಲೆ ನಾಗಮಂಗಲದ ಖಾಸಗಿ ಕಾಲೇಜಿನಲ್ಲಿ.
ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿ ಡಿಪ್ಲೊಮಾ ಓದುತ್ತಿದ್ದ. ಆದ್ರೆ ಆತ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಹೀಗಾಗಿ, ತಿಳಿವಳಿಕೆ ಹೇಳುವಂತೆ ಉಪನ್ಯಾಸಕರೊಬ್ಬರು, ಆತನ ಪೋಷಕರಿಗೆ ಹೇಳಿದ್ದಾರೆ. ಮಾಹಿತಿ ತಿಳಿದ ಪೋಷಕರು, ಮಗನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇತ್ತ ಪೋಷಕರಿಗೆ ವಿಷಯ ತಿಳಿಸಿದ್ದಕ್ಕೆ ವಿದ್ಯಾರ್ಥಿ ಉಪನ್ಯಾಸಕನ ವಿರುದ್ಧ ಕೋಪಗೊಂಡಿದ್ದಾನೆ. ಲಾಂಗ್ ಹಿಡಿದೇ ತರಗತಿಗೆ ಬಂದ ವಿದ್ಯಾರ್ಥಿ ಅದನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಇದನ್ನು ಬೇರೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಆ ವಿಡಿಯೋ ವೈರಲ್ ಆಗಿದೆ.
ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿದ್ಯಾರ್ಥಿಯಿಂದ ಬೈಕ್ ಹಾಗೂ ಲಾಂಗ್‍ನ್ನು ವಶಪಡಿಸಿಕೊಂಡಿದ್ದು, ವಿದ್ಯಾರ್ಥಿಯಿಂದ ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದ್ದಾರೆ.