BengaluruScience

ಚಂದ್ರಯಾನ-3ಗೆ ಸ್ವಾಗತ ಕೋರಿದ ಚಂದ್ರಯಾನ-2 ಆರ್ಬಿಟರ್‌

ಬೆಂಗಳೂರು; ಚಂದ್ರಯಾನ-3 ಚಂದ್ರನ ಮೇಲೆ ಲ್ಯಾಂಡ್‌ ಆಗಲು ಕ್ಷಣಗಣನೆ ಶುರುವಾಗಿದೆ. ವಿಕ್ರಮ್‌ ಲ್ಯಾಂಡರ್ ಚಂದ್ರನಿಗೆ ಹತ್ತಿರವಾಗಿದ್ದು, ಕೆಲ ಫೋಟೋಗಳನ್ನೂ ಕಳುಹಿಸಿದೆ. ಈ ನಡುವೆ ಮತ್ತೊಂದು ಮೈಲುಗಲ್ಲು ಕೂಡಾ ಸಾಧಿಸಿದೆ.  ಚಂದ್ರಯಾನ-3 ರ ವಿಕ್ರಮ್‌ ಲ್ಯಾಂಡರ್, ಚಂದ್ರಯಾನ-2 ರ ಆರ್ಬಿಟರ್ ಸಂಪರ್ಕ ಸಾಧಿಸಿದೆ. ಚಂದ್ರಯಾನ-2 ಆರ್ಬಿಟರ್‌ನೊಂದಿಗೆ ಸಂಪರ್ಕ ಸಾಧಿಸಿರುವ ಮಾಹಿತಿಯನ್ನು ಇಸ್ರೋ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

2019ರಲ್ಲಿ ಇಸ್ರೋ ಚಂದ್ರಯಾನ-2 ಯೋಜನೆ ಆರಂಭಿಸಿದಾಗ ಅದರ ಆರ್ಬಿಟರ್‌ ಅನ್ನು ಚಂದ್ರನ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಲಾಗಿತ್ತು. ಆದರೆ, ಇದರ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲು ವಿಫಲವಾಗಿದ್ದರಿಂದ ಸಂವಹನ ಕಡಿತಗೊಂಡಿತ್ತು.

Share Post