ಆಗಸ್ಟ್ 23ಕ್ಕೆ ಚಂದ್ರ ಮೇಲೆ ಇಳಿಯಲಿರುವ ಚಂದ್ರಯಾನ-೩; ಈಗ ಎಷ್ಟು ಹತ್ತಿರದಲ್ಲಿದೆ ಗೊತ್ತಾ..?
ಬೆಂಗಳೂರು; ಇದೇ ಆಗಸ್ಟ್ 23ಕ್ಕೆ ಚಂದ್ರಯಾನ-೩ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ. ಇದಕ್ಕಾಗಿ ಇಸ್ರೋ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಚಂದ್ರಯಾನ-೩ ಇತಿಹಾಸ ಸೃಷ್ಟಿಸಲು ಬಹಳ ಸನಿಹಕ್ಕೆ ಬಂದಿದೆ. ಚಂದ್ರನಿಗೆ ಬಹಳ ಹತ್ತಿರವಾಗಿರುವ ಚಂದ್ರಯಾನ-೩ ಚಂದ್ರನ ಕೆಲ ಫೋಟೋಗಳನ್ನು ಕಳುಹಿಸಿದೆ.
ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ ಮೂಲಕ ಚಂದ್ರನ ದೂರದ ಭಾಗದ ಚಿತ್ರಗಳನ್ನು ಕಳುಹಿಸಿದೆ. ಚಂದ್ರಯಾನ-3 ಮಿಷನ್ ಅಡಿಯಲ್ಲಿ, ಲ್ಯಾಂಡರ್ ಮಾಡ್ಯೂಲ್ ಆಗಸ್ಟ್ 23, 2023 ರಂದು ಸಂಜೆ 6.04 ಕ್ಕೆ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಮಾಡಲಿದೆ.
ಗಯಾ ಲ್ಯಾಂಡರ್ ಚಂದ್ರನ ಮೇಲೆ ಸಂಜೆ 5.45 ಕ್ಕೆ ಇಳಿಯಲಿದೆ ಎಂದು ಮೊದಲು ಮಾಹಿತಿ ನೀಡಲಾಗಿತ್ತು, ಆದರೆ ಈಗ ಅದರಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ.