ಉಪೇಂದ್ರ ವಿರುದ್ಧ ಜಾತಿ ನಿಂದನೆ ಕೇಸ್; ಹೈಕೋರ್ಟ್ ಮೊರೆಹೋದ ನಟ
ಬೆಂಗಳೂರು; ಊರು ಎಂದ ಮೇಲೆ ಹೊಲಗೇರಿ ಇದ್ದೇ ಇರುತ್ತೆ ಎಂದು ಹೇಳಿದ್ದ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಎರಡು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಿಸಲಾಗಿದೆ. ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಇಂದು ವಿಚಾರಣೆಗೆ ಬರುವಂತೆ ನೋಟಿಸ್ ಕೂಡಾ ನೀಡಿದ್ದರು. ಆದ್ರೆ ಉಪೇಂದ್ರ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಎರಡೂ ಮನೆಗಳಲ್ಲಿ ಕೂಡಾ ಅವರು ಇಲ್ಲ.
ಪೊಲೀಸರು ಎರಡೂ ಮನೆಗಳಿಗೆ ನೋಟಿಸ್ ತಲುಪಿಸಿದ್ದಾರೆ. ಆದ್ರೆ ಅಲ್ಲಿ ಉಪೇಂದ್ರ ಇಲ್ಲ. ಹೀಗಾಗಿ ಅವರ ವಾಟ್ಸಾಪ್‌ಗೂ ನೋಟಿಸ್ ಕಳುಹಿಸಲಾಗಿದೆ. ಆದ್ರೆ ಬಂಧನದ ಭೀತಿ ಇರುವುದರಿಂದ ಉಪೇಂದ್ರ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಉಪೇಂದ್ರ ಅವರ ಪರವಾಗಿ ಅವರ ವಕೀಲರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ.
ನಾನು ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ಯಾವುದೇ ಅಪಾರಾಧ ಎಸಗಿಲ್ಲ. ಒಳ್ಳೆಯದನ್ನು ಮಾಡುವಾಗ ಟೀಕಿಸುವವರು ಇದ್ದೇ ಇರುತ್ತಾರೆ ಎಂದು ಹೇಳುವಾಗ ಹಳೆಯ ಗಾದೆಯನ್ನು ಬಳಸಿದ್ದೇನೆ. ನಾನು ಯಾವುದೇ ಸಮುದಾಯದ ವಿರುದ್ಧ ಮಾತನಾಡಿಲ್ಲ. ಹಳೆಯ ಗಾದೆಯನ್ನು ನಾನು ಬಳಸಿದ್ದು, ವಿರೋದ ವ್ಯಕ್ತವಾಗುತ್ತಿದ್ದಂತೆ ನಾನು ಅದನ್ನು ಡಿಲೀಟ್ ಕೂಡಾ ಮಾಡಿದ್ದೇವೆ. ಜೊತೆಗೆ ಕ್ಷಮೆ ಕೂಡಾ ಯಾಚನೆ ಮಾಡಿದ್ದೇನೆ. ತಾರತಮ್ಯದ ವಿರುದ್ಧ ನಾನು ಕೂಡಾ ಕೂಡಾ ಹೋರಾಟ ಮಾಡುತ್ತಿದ್ದೇನೆ.
ಹೀಗಾಗಿ ನನ್ನು ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಬೇಕೆಂದು ಉಪೇಂದ್ರ ಹೈಕೋರ್ಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೋರ್ಟ್ ಏನು ಆದೇಶ ನೀಡುತ್ತೆ ಎಂಬುದು ಮಾತ್ರ ಇನ್ನೂ ಕುತೂಹಲ.