HealthNational

ದಿನವೂ ಒಂದೇ ಸಮಯಕ್ಕೆ ಮಲಗದೇ ಹೋದರೆ ಏನಾಗುತ್ತೆ ಗೊತ್ತಾ..?

ಬೆಂಗಳೂರು; ನಗರಗಳಲ್ಲಿ ಕೆಲಸ ಮಾಡುವವರು ಬಹುತೇಕ ಶಿಫ್ಟ್‌ ಪ್ರಕಾರ ಕೆಲಸ ಮಾಡುತ್ತಾರೆ. ಇದರಿಂದಾಗಿ ನಿದ್ದೆ ಮಾಡುವ ಸಮಯ ಬದಲಾಗುತ್ತದೆ. ಇನ್ನು ಕೆಲಸ ಮಾಡುವ ದಿನಗಳಲ್ಲಿ ಮಾಡುವ ನಿದ್ದೆಯ ಸಮಯ ಹಾಗೂ ರಜೆ ದಿನಗಳಲ್ಲಿ ಮಾಡುವ ನಿದ್ದೆ ಸಮಯದಲ್ಲೂ ಬದಲಾವಣೆ ಇರುತ್ತದೆ. ಹೀಗೆ ಒಂದು ನಿಗದಿತ ಸಮಯವಲ್ಲದೆ ಬೇರೆ ಬೇರೆ ಸಮಯದಲ್ಲಿ ಹೇಗಂದ್ರೆ ಹಾಗೇ ನಿದ್ದೆ ಮಾಡಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಅನ್ನುತ್ತಿವೆ ಅಧ್ಯಯನಗಳು. ಹೌದು, ನಿದ್ದೆ ಮಾಡುವ ಸಮಯದಲ್ಲಿ ಪ್ರತಿ ದಿನ ಸಣ್ಣ ಬದಲಾವಣೆಗಳಾದರೂ ಕರುಳಿನ ಬ್ಯಾಕ್ಟೀರಿಯಾವನ್ನು ಅನಾರೋಗ್ಯಕ್ಕೀಡು ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ.

ಬ್ರಿಟನ್‌ಗೆ ಸೇರಿದ ಸಂಶೋಧಕರ ಗುಂಪೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಇವರ ಪ್ರಕಾರ ಒಂದು ದಿನ ಹೆಚ್ಚು ನಿದ್ದೆ ಮಾಡುವುದು, ಇನ್ನೊಂದು ದಿನ ಕಡಿಮೆ ನಿದ್ದೆ ಮಾಡುವುದು. ಮಲಗುವ ಹಾಗೂ ಏಳುವ ಸಮಯದಲ್ಲೂ ವ್ಯತ್ಯಾಸ ಇರುವುದು, ವಾರದ ದಿನಗಳಲ್ಲಿ, ವಾರಾಂತ್ಯದಲ್ಲಿ ಮಲಗುವ ಸಮಯದಲ್ಲಿ ವ್ಯತ್ಯಾಸವಾಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದಂತೆ.

ಯಾವಾಗಲೂ ಮಲಗುವ ಸಮಯ ಹಾಗೂ ಎಚ್ಚರಗೊಳ್ಳುವ ಸಮಯವನ್ನು ನಿಗದಿ ಮಾಡಿಕೊಂಡು ಅದನ್ನು ಯಾವಾಗಲೂ ಫಾಲೋ ಮಾಡಬೇಕು. ಜೊತೆಗೆ ಸಮತೋಲಿತ ಆಹಾರ ಸೇವನೆ ಮಾಡಬೇಕು. ಹೀಗೆ ಮಾಡುವುದರಿಂದ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬಹುದೆಂದು ಅಧ್ಯಯನ ತಂಡ ತಿಳಿಸಿದೆ. ಸಾವಿರ ಜನರ ಈ ಪ್ರಯೋಗ ಮಾಡಲಾಗಿದ್ದು, ಇದರಿಂದ ಬಂದ ವರದಿಯ ಆಧಾರದ ಮೇಲೆ ತಜ್ಞರು ಈ ಮಾಹಿತಿ ನೀಡಿದ್ದಾರೆ.

 

ಒಂದೇ ವಾರದಲ್ಲಿ ನೀವು ಮಲಗುವ ಹಾಗೂ ಎದ್ದೇಳುವ ಸಮಯದಲ್ಲಿ 90  ನಿಮಿಷಗಳು ವ್ಯತ್ಯಾಸವಾದರೂ ನಿಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾ ಮೇಲೆ ದುಷ್ಪರಿಣಾಮ ಬೀರಲಿದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ವಿವಿಧ ಬ್ಯಾಕ್ಟೀರಿಯಾಗಳನ್ನು ಹೊಂದಿರುವುದು ಅತ್ಯಗತ್ಯ. ವಿವಿಧ ರೋಗಗಳನ್ನು ಪರಿಣಾಮಕಾರಿಯಾಗಿ ಹೋರಾಡಲು ದೇಹಕ್ಕೆ ಬ್ಯಾಕ್ಟೀರಿಯಾದ ಸರಿಯಾದ ಮಿಶ್ರಣವು ಬಹಳ ಮುಖ್ಯವಾಗಿದೆ.

ಅಧ್ಯಯನದಲ್ಲಿ ಭಾಗವಹಿಸಿದವರು ನಿದ್ರೆಯ ಸಮಯ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷೆಗೊಳಪಡಿಸಿ ಅಧ್ಯಯನ ಮಾಡಲಾಗಿದೆ. ಜೊತೆ ಆಹಾರ ತೆಗೆದು ವಿಧಾನಗಳನ್ನೂ ಪರೀಕ್ಷಿಸಲಾಗಿದೆ.

 

Share Post