CrimeNational

ಮುಂಬೈ ಕಾಲೇಜಿನಲ್ಲಿ ಬುರ್ಖಾ ವಿವಾದ; ಬುರ್ಖಾ ನಿಷೇಧಿಸಿದ್ದಕ್ಕೆ ಶುರುವಾಯ್ತು ಜಗಳ

ಮುಂಬೈ; ಕಳೆದ ವರ್ಷ ಹಿಜಾಬ್‌ ವಿವಾದ ಕರ್ನಾಟದಲ್ಲಿ ದೊಡ್ಡ ಸದ್ದು ಮಾಡಿತ್ತು. ಕಾಲೇಜಿಗೆ ಹಿಜಾಬ್‌ ಧರಿಸಿಕೊಂಡು ಬರಬಾರದೆಂದು ಮುಸ್ಲಿಂ ವಿದ್ಯಾರ್ಥಿನಿಯರು ಉಡುಪಿಯ ಕಾಲೇಜು ಆಡಳಿತ ಮಂಡಳಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ವಿವಾದ ಏರ್ಪಟ್ಟಿತ್ತು. ಇದೀಗ ಇಂತಹದ್ದೇ ವಿಔಆದ ಮುಂಬೈನಲ್ಲಿ ಶುರುವಾಗಿದೆ.

ಮುಂಬೈನ ಚೆಂಬೂರಿನ ಖಾಸಗಿ ಕಾಲೇಜಿಗೆ ಕೆಲ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕ್ಯಾಂಪಸ್‌ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿದೆ. ಗೇಟ್‌ ಬಳಿಯೇ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಬುರ್ಖಾ ತೆಗೆದರೆ ಮಾತ್ರ ಕಾಲೇಜು ಆವರಣಕ್ಕೆ ಪ್ರವೇಶ ಎಂದಿದ್ದಾರೆ. ಇದರಿಂದಾಗಿ ವಾಗ್ವಾದ ಶುರುವಾಗಿದೆ. ಅನಂತರ ಕಾಲೇಜು ಬಳಿ ವಿದ್ಯಾರ್ಥಿನಿಯರು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಬಂದ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನು ವಿದ್ಯಾರ್ಥಿನಿಯರಿಗೆ ಕಾಲೇಜು ಆವರಣದಲ್ಲಿ ಬುರ್ಖಾ ಧರಿಸಲು ಅನುಮತಿ ನೀಡಲಾಗಿದ್ದು, ವಿಶ್ರಾಂತಿ ಕೊಠಡಿಯಲ್ಲಿ ಬುರ್ಖಾ ತೆಗೆದು ತರಗತಿಗೆ ಹಾಜರಾಗೋದಾಗಿ ಹೇಳಿದ್ದಾರೆ.  ಆದ್ರೆ ತರಗತಿಯಲ್ಲಿ ಸ್ಕಾರ್ಫ್‌ ಧರಿಸಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ. ಇದಕ್ಕೆ ಆಡಳಿತ ಮಂಡಳಿ ಒಪ್ಪಿದೆ ಎಂದು ತಿಳಿದುಬಂದಿದೆ.

 

Share Post