CrimeDistricts

ಪತ್ನಿಯ ಕಿರುಕುಳಕ್ಕೆ ನವವಿವಾಹಿತ ಆತ್ಮಹತ್ಯೆ..!

ಹಾಸನ; ಪತಿ ಹಾಗೂ ಆವರ ಮನೆಯವರ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳನ್ನು ನಾವು ನೋಡಿದ್ದೇವೆ. ಆದ್ರೆ ವಿರುದ್ಧವಾದ ಘಟನೆ. ಯಾಕಂದ್ರೆ ಇಲ್ಲಿ ಪತ್ನಿ ಹಾಗೂ ಆಕೆಯ ಮನೆಯವರ ಕಿರುಕುಳಕ್ಕೆ ಬೇಸತ್ತು ನವವಿವಾಹಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ಬಳಿಯ ಕರಿಯಪ್ಪನಗುಡಿ ಎಂಬ ಗ್ರಾಮದಲ್ಲಿ ಈ ಗಟನೆ ನಡೆದಿದೆ.

ಇಪ್ಪತ್ತಾರು ವರ್ಷದ ಕಿರಣ್.ಬಿ.ಬಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತ. ಈಗ ಉದಯಪುರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಫೆಬ್ರವರಿ 19ರಂದು ವಗರಹಳ್ಳಿಯ ಸ್ಪಂದನಾ ಎಂಬಾಕೆಯನ್ನು ಕಿರಣ್‌ ಪ್ರೀತಿಸಿ ಮದುವೆಯಾಗಿದ್ದ. ಆದ್ರೆ ಸ್ಪಂದನಾ ಮದುವೆಯ ಬಳಿಕ ಕಿರಣ್‌ ಜೊತೆ ಸಂಸಾರ ನಡೆಸಿಲ್ಲ. ಬದಲಾಗಿ ತವರು ಮನೆಯಲ್ಲೇ ಠಿಕಾಣಿ ಹೂಡಿಬಿಟ್ಟಿದ್ದಾಳೆ. ಇದಲ್ಲದೆ ಸ್ಪಂದನಾ ಅವರ ಪೋಷಕರು ಕಿರಣ್‌ಗೆ ಹಣಕ್ಕಾಗಿ ಬೇಡಿಕೆ ಕೂಡಾ ಇಟ್ಟಿದ್ದರಂತೆ. ಇದರಿಂದ ನನಗೆ ದೈಹಿಕ ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಎಂದು ಮನನೊಂದು ಕಿರಣ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಿರಣ್‌ಗೆ ಹಣಕ್ಕಾಗಿ ಪೀಡಿಸಿದ್ದರಂತೆ. ಹಣ ನೀಡದಿದ್ದಾಗ ಸ್ಪಂದನಾ ಚೆನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಿರಣ್‌ ವಿರುದ್ಧವೇ ವರದಕ್ಷಿಣೆ ಕಿರುಕುಳ ಕೇಸ್‌ ದಾಖಲಿಸಿದ್ದಳಂತೆ. ಇದಾದ ಮೇಲೆ ಜಾಮೀನು ಪಡೆದು ಬಿಡುಗಡೆಯಾಗಿ ಬಂದಿದ್ದ ಕಿರಣ್‌, ಬೇಕರಿ ನಡೆಸಿಕೊಂಡಿದ್ದ. ಆದ್ರೆ ಸ್ಪಂದನಾಳ ಪೋಷಕರು ಬೇಕರಿ ಬಳಿಯೂ ಬಂದು ಜಗಳ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅನಂತರ ಕಿರಣ್‌ ಜುಲೈ 31ರಂದು ಮನೆಯಿಂದ ಹೊರಹೋದವನು ಮತ್ತೆ ಬಂದಿರಲಿಲ್ಲ.

ಇದರಿಂದ ಅನುಮಾನಗೊಂಡು ಆತನ ಪೋಷಕರು ಹುಡುಕಾಟ ನಡೆಸಿದಾಗ ಗ್ರಾಮದ ದೂಳಪ್ಪ ಎಂಬುವವರ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿವುದು ಬೆಳಕಿಗೆ ಬಂದಿದೆ.

 

Share Post