OMICRON ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆ : ದೆಹಲಿ
ನವದೆಹಲಿ : ದೆಹಲಿ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಒಮಿಕ್ರಾನ್ ಸೋಂಕಿತರಿಗೆ ಪ್ರತ್ಯೇಕ ಆಸ್ಪತ್ರೆಯನ್ನು ನಿಗದಿ ಪಡಿಸಿದೆ. ಒಮಿಕ್ರಾನ್ ಭೀತಿ ರಾಷ್ಟ್ರದಗಲಕ್ಕೂ ಹರಡಿದೆ ಆದರೂ ಇನ್ನೂ ಯಾವುದೇ ಪಾಸಿಟಿವ್ ಕೇಸ್ಗಳು ಕಂಡು ಬಂದಿಲ್ಲ. ಆದರೆ ಸರ್ಕಾರಗಳು ಈಗಿನಿಂದಲೇ ಎಚ್ಚರ ವಹಿಸುತ್ತಿರುವುದು ನಿಜಕ್ಕೂ ಒಳ್ಳೆಯ ನಡೆಯಾಗಿದೆ.
ದೆಹಲಿ ಸರ್ಕಾರವು ಲೋಕನಾಯಕ ಆಸ್ಪತ್ರೆಯನ್ನು ಹೊಸ ರೂಪಾಂತರಿ ಸೋಂಕಿತರಿಗಾಗಿ ನಿಗದಿಪಡಿಸಲಾಗಿದೆ.
WHO ಈ ಹೊಸ ತಳಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆ ಎಲ್ಲಾ ರಾಷ್ಟ್ರಗಳು ಇದನ್ನು ಗಂಭೀರವಾಗಿ ಪರಿಗಣಿಸಿವೆ. ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪ್ರತ್ಯೇಕ ಮಾರ್ಗ ಸೂಚಿಯನ್ನು ಭಾರತ ಸರ್ಕಾರ ಬಿಡುಗಡೆ ಮಾಡಿದೆ.