CrimeDistricts

ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ; ಪೊಲೀಸರು ಕಾನೂನಿನಂತೆ ನಡ್ಕೊಂಡಿದಾರೆ – ಖುಷ್ಬು

ಉಡುಪಿ; ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ ಸಂಬಂದ ಪೊಲೀಸರು ಕಾನೂನಿನಂತೆ ನಡೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖಷ್ಬು ಸುಂದರ್‌ ಹೇಳಿದ್ದಾರೆ. ಪ್ರಕರಣದ ಮಾಹಿತಿ ಪಡೆಯಲು ನಿನ್ನೆ ಅವರು ಉಡುಪಿಗೆ ಬಂದಿದ್ದು, ಕಾಲೇಜು ಆಡಳಿತ ಮಂಡಳಿ, ವಿದ್ಯಾರ್ಥಿನಿಯರು ಹಾಗೂ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಹಿತಿ ಪಡೆದಿದ್ದಾರೆ. ಅನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, ಪ್ರಕರಣವನ್ನು ಯಾರೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದ್ದಾರೆ.

ಯಾರೂ ಕೂಡಾ ಈ ಬಗ್ಗೆ ವದಂತಿಗಳನ್ನು ಹಬ್ಬಿಸಬಾರದು ಎಂದಿರುವ ಖುಷ್ಬೂ, ಯುವತಿಯರ ರಕ್ಷಣೆ ಮಾತ್ರ ನಮಗೆ ಮುಖ್ಯ ಎಂದು ಹೇಳಿದ್ದಾರೆ. ಕಾಲೇಜಿನವರು ವಿಡಿಯೋ ಡಿಲೀಟ್‌ ಮಾಡಿದ್ದಾರೆ. ಈಗ ಪೊಲೀಸರು ಕಾನೂನು ರೀತಿ ತನಿಖೆ ಮಾಡುತ್ತಿದ್ದಾರೆ. ನಾವು ಈ ಪ್ರಕರಣ ಸಂಬಂಧ ವದಂತಿಗಳನ್ನು ಹಬ್ಬಿಸಬಾರದು. ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೂ ತನಿಖಾಧಿಕಾರಿ, ನ್ಯಾಯಾಧೀಶರಾಗಲು ಹೊರಟಿದ್ದಾರೆ. ಇದು ಸರಿಯಲ್ಲ. ಕಾನೂನಿಗೆ ಕೆಲಸ ಮಾಡಲು ಬಿಡಿ ಎಂದು ಖುಷ್ಬೂ ಮನವಿ ಮಾಡಿದ್ದಾರೆ.

 

Share Post