CrimeDistricts

ಮದ್ಯವ್ಯಸನಮುಕ್ತ ಕೇಂದ್ರದಲ್ಲಿ ಯುವಕನ ಅನುಮಾನಾಸ್ಪದ ಸಾವು!

ಚಿಕ್ಕಬಳ್ಳಾಪುರ; ಯುವಕನೊಬ್ಬ ಮದ್ಯವ್ಯಸನ ಹಾಗೂ ಗಾಂಜಾಗೆ ದಾಸನಾಗಿದ್ದ. ಹೀಗಾಗಿ ಆತನ ಪೋಷಕರು ಮದ್ಯವ್ಯಸನಮುಕ್ತ ಕೇಂದ್ರಕ್ಕೆ ದಾಖಲು ಮಾಡಿದ್ದರು. ಆದ್ರೆ ಒಂದೇ ವಾರದಲ್ಲಿ ಆ ಯುವಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಚಿಂತಾಮಣಿ ತಾಲ್ಲೂಕಿನ ಬುಡಗವಾರಹಳ್ಳಿ ಬಳಿ ಮದ್ಯವ್ಯವಸನಮುಕ್ತ ಹಾಗೂ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವಿದೆ. ಇದರಲ್ಲಿ ಶ್ರೀನಿವಾಸಪುರದ ಮಂಜುನಾಥ್‌ ಎಂಬ 21 ವರ್ಷದ ಯುವಕನನ್ನು ಸೇರಿಸಲಾಗಿತ್ತು. ಆತ ಗಾಂಜಾ ವ್ಯಸನಿಯಾಗಿದ್ದು, ಮದ್ಯವನ್ನೂ ಸೇವನೆ ಮಾಡುತ್ತಿದ್ದ. ಹೀಗಾಗಿ, ಆತನಿಗೆ ಈ ಚಟ ಬಿಡಿಸಲು ಇಲ್ಲಿ ಸೇರಿಸಲಾಗಿತ್ತು. ಆದ್ರೆ ಅದೇನಾಯ್ತೋ ಏನೋ ಐದೇ ದಿನದಲ್ಲಿ ಆ ಯುವಕ ಸಾವನ್ನಪ್ಪಿದ್ದಾನೆ.

ಮಂಜುನಾಥನ ಹಠಾತ್‌ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮೃತದೇಹ ಮೇಲೆ ಹಲ್ಲೆ ಮಾಡಿರುವ ಗರುತುಗಳು ಪತ್ತೆಯಾಗಿದ್ದು, ಇದು ಸಹಜ ಸಾವಲ್ಲ ಕೊಲೆ ಎಂದು ಯುವಕ ಮಂಜುನಾಥನ ಪೋಷಕರು ಆರೋಪ ಮಾಡುತ್ತಿದ್ಧಾರೆ. ಈ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post