ಯಾರೂ ಕೊಡದ ಬಜೆಟ್ಟಾ ಇದು..?; ಮಕ್ಕಳಿಗೆ ಶಿಕ್ಷೆ ಕೊಟ್ಟಂತೆ ಅಮಾನತು ಮಾಡಿದ್ದಾರೆ – ಹೆಚ್ಡಿಕೆ ವಾಗ್ದಾಳಿ
ಬೆಂಗಳೂರು; ಡೆಪ್ಯೂಟಿ ಸ್ಪೀಕರ್ ಮೇಲೆ ಕಾಗದಗಳನ್ನು ಎಸೆದಿದ್ದಕ್ಕೆ ಹತ್ತು ಶಾಸಕರನ್ನು ಅಮಾನತು ಮಾಡಿರುವುದಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸೌಧದಲ್ಲಿ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಇದರಲ್ಲಿ ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಕ್ಕಳಿಗೆ ಶಿಕ್ಷೆ ಕೊಟ್ಟ ಹಾಗೆ ಅಮಾನತು ಮಾಡಿದರೆ ಒಪ್ಪುವುದಕ್ಕೆ ಆಗುತ್ತದಾ..? ಎಂದು ಪ್ರಶ್ನೆ ಮಾಡಿರುವ ಕುಮಾರಸ್ವಾಮಿ, ಲೋಕಸಭೆಯಲ್ಲಿ ಕಾಂಗ್ರೆಸ್‌ನವರು ಕೂಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧ ಪಕ್ಷಗಳು ಅಂದಮೇಲೆ ಪ್ರತಿಭಟನೆ ಇದ್ದೇ ಇರುತ್ತದೆ. ಅದಕ್ಕೆ ಅಮಾನತು ಮಾಡೋದು ಎಷ್ಟು ಸರಿ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಆಡಳಿತ ಪಕ್ಷದ ಸಲಹೆ ಮೇರೆಗೆ ಸ್ಪೀಕರ್ ಅಮಾನತು ಆದೇಶ ಹೊರಡಿಸಿದ್ದಾರೆ. ನಾವು ಬಜೆಟ್ ಮೇಲಿನ ಚರ್ಚೆಗೆ ಸಿದ್ಧತೆ ಮಾಡಿಕೊಂಡಿದ್ವಿ. ಆದ್ರೆ ಸಣ್ಣ ಘಟನೆ ಕಲಾಪವನ್ನು ಹಾಳು ಮಾಡುತ್ತಿದ್ದಾರೆ. ಎರಡು ನಿಮಿಷದಲ್ಲಿ ಮುಗಿಸಬಹುದಾಗಿದ್ದ ಸಮಸ್ಯೆಯನ್ನು ದೊಡ್ಡದು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇನ್ನು ನಿನ್ನೆ ಸಿದ್ದರಾಯ್ಯ ಅವರು ಖಾಲಿ ಬೆಂಚ್‌ಗೆ ಗಂಟೆ ಭಾಷಣ ಮಾಡಿದ್ದಾರೆ ಎಂದೂ ಲೇವಡಿ ಮಾಡಿದ್ದಾರೆ.