BengaluruCrime

ಶಂಕಿತ ಉಗ್ರರು ಅಡಗಿಸಿಟ್ಟಿದ್ದ 5 ಗ್ರೆನೇಡ್‌ಗಳು ವಶಕ್ಕೆ

ಬೆಂಗಳೂರು; ನಿನ್ನೆ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಅವರನ್ನು ಐದು ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ಧಾರೆ. ಈ ವೇಳೆ ಶಂಕಿತ ಉಗ್ರರು ಹಲವು ಮಹತ್ವದ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ಕೊಡಿಗೇಹಳ್ಳಿಯ ನಿವಾಸದಲ್ಲಿ ಪೊಲೀಸರು ಪರಿಶೀಲನೆ ಮಾಡಿದ್ದು, ಈ ವೇಳೆ ಐದು ಗ್ರೆನೇಡ್‌ಗಳು ಪತ್ತೆಯಾಗಿದೆ.

ಶಂಕಿತ ಉಗ್ರರಲ್ಲಿ ಒಬ್ಬ ಕೊಡಿಗೇಹಳ್ಳಿಯಲ್ಲಿ ಮನೆ ಮಾಡಿದ್ದ. ಈ ಮನೆಯಲ್ಲಿ ಗ್ರೆನೇಡ್‌ಗಳನ್ನು ಅಡಗಿಸಿಡಲಾಗಿತ್ತು. ವಿಚಾರಣೆ ವೇಳೆ ಈ ವಿಚಾರವನ್ನು ಬಾಯ್ಬಿಟ್ಟಿದ್ದರು. ಹೀಗಾಗಿ ಸಿಸಿಬಿ ಪೊಲೀಸರು ಇಂದು ಆ ಮನೆಗೆ ದಾಳಿ ನಡೆಸಿ ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

 

Share Post