CinemaNational

ಮದುವೆ ಯಾವಾಗ ಅಂದ್ರೆ ನಾನಿನ್ನೂ ಪ್ರಗ್ನೆಂಟೇ ಆಗಿಲ್ಲ ಅಂತಿದ್ದಾರೆ ತಾಪ್ಸಿ ಪನ್ನು..!

ಮುಂಬೈ; ನಟಿ ತಾಪ್ಸಿ ಪನ್ನು ಇತ್ತೀಚೆಗೆ ಚಿತ್ರರಂಗದಿಂದ ಬಿಡುವು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಹಲವು ಹಿಟ್‌ಗಳನ್ನು ಕೊಟ್ಟ ಅವರು, ಈ ಕೊಂಚ ಬ್ರೇಕ್‌ ತೆಗೆದುಕೊಂಡು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದಾರೆ. ಹೀಗೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಅವರು ಫನ್ನಿಯಾಗಿ ಉತ್ತರ ಕೊಟ್ಟಿದ್ದಾರೆ. ಈ ಉತ್ತರ ಸಖತ್‌ ವೈರಲ್‌ ಆಗುತ್ತಿದೆ.

ಅಭಿಮಾನಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಅವರು ಕೊಟ್ಟ ಉತ್ತರ, ನಾನಿನ್ನೂ ಗರ್ಭಿಯಾಗಿಲ್ಲ ಅನ್ನೋದು. ಸದ್ಯಕ್ಕಂತೂ ಮದುವೆಯಾಗಲ್ಲ. ಆದಾಗ ನಿಮಗೂ ತಿಳಿಸುತ್ತೇನೆ ಬಿಡಿ ಎಂದು ತಾಪ್ಸಿ ಹೇಳಿದ್ದಾರೆ. ಈ ಹಿಂದೆ ಕೂಡಾ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಕ್ಕಳನ್ನು ಪಡೆಯಬೇಕಿ ಎನಿಸಿದಾಗ ನಾನು ಮದುವೆಯಾಗುತ್ತೇನೆ ಎಂದು ಹೇಳಿದ್ದರು.

ತಾಪ್ಸಿ ಪನ್ನು ಅವರು, ಬ್ಯಾಡ್ಮಿಂಟನ್ ಆಟಗಾರ, ಕೋಚ್ ಮಥಾಯಿಸ್ ಬೋ ಅವರ ಜೊತೆ ತುಂಬಾ ದಿನಗಳಿಂದ ಸುತ್ತಾಡುತ್ತಿದ್ದಾರೆ. ಅವರ ಜೊತೆ ಫಾರಿನ್‌ ಟ್ರಿಪ್‌ ಹೋದಾಗ ಆ ಫೋಟೋಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಇದೀಗ ತಾಪ್ಸಿಗೆ 35 ವರ್ಷ ವಯಸ್ಸು, ಇಷ್ಟು ವಯಸ್ಸಾದರೂ ಮದುವೆ ಬಗ್ಗೆ ಕೇಳಿದರೆ ಜಾರಿಕೊಳ್ಳುವ ರೀತಿಯಲ್ಲಿ ಫನ್ನಿ ರಿಯಾಕ್ಷನ್‌ ಕೊಟ್ಟು ಸುಮ್ಮನಾಗುತ್ತಿದ್ದಾರೆ.

 

Share Post