BengaluruCrime

ಪುಷ್ಪ ಸಿನಿಮಾ ಸ್ಟೈಲ್‌ನಲ್ಲಿ ಗಾಂಜಾ ಸಾಗಾಟ; 12 ಕೋಟಿ ಮೌಲ್ಯದ ಮಾದಕ ವಸ್ತು ವಶ..!

ಬೆಂಗಳೂರು; ತೆಲುಗಿನ ಪುಷ್ಪ ಸಿನಿಮಾ ಸ್ಟೈಲ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಜಾಲವನ್ನು ಬೇಧಿಸುವಲ್ಲಿ ಬೆಂಗಳೂರಿನ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, 12 ಕೋಟಿ ರೂಪಾಯಿ ಬೆಲೆಬಾಳುವ 1500 ಕೆಜಿ ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸರ ಇತಿಹಾಸದಲ್ಲೇ ಇಷ್ಟ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿರುವುದು ಇದೇ ಮೊದಲಂತೆ..!

ಮಹಿಳಾ ಸಂರಕ್ಷಕ ದಳಕ್ಕೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಅದರ ಬೆನ್ನತ್ತಿದ್ದ ಪೊಲೀಸರುಕುಖ್ಯಾತ ಗಾಂಜಾ ಪೆಡ್ಲರ್ ಸೇರಿ ಮೂವರನ್ನು ಬಂಧಿಸಿದ್ದಾರೆ. ಸಲ್ಮಾನ್ ಪಾಷಾ, ಚಂದ್ರು ಭಾನು ಬಿಶ್ಣೋಯ್ ಹಾಗೂ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿಗಳಾಗಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಗೂಡ್ಸ್‌ ವಾಹನ ವಶಕ್ಕೆ ಪಡೆಯಲಾಗಿದೆ.

ಗೂಡ್ಸ್ ವಾಹನದ ಚಾರ್ಸಿ ಮಾರ್ಪಾಡು ಮಾಡಿದ್ದು, ಚಾರ್ಸಿ ಅಡಿಯಲ್ಲಿ ಒಂದು ಅಡಿ ಎತ್ತರದ ಸೀಕ್ರೇಟ್ ಚಾರ್ಸಿ ನಿರ್ಮಾಣ ಮಾಡಿ, ಅಲ್ಲಿ ಗಾಂಜಾ ಪ್ಯಾಕ್​ಗಳನ್ನ ಜೋಡಿಸಲಾಗುತ್ತಿತ್ತು. ಅದರ ಮೇಲೆ ಖಾಲಿ ಕಾಟನ್ ಬಾಕ್ಸ್​ಗಳನ್ನು ತುಂಬಿಕೊಂಡು ಯಾರಿಗೂ ಗೊತ್ತಿಲ್ಲದಂತೆ ಗಾಂಜಾ ಸಾಗಿಸುತ್ತಿದ್ದರು. ಆಂಧ್ರದ ವಿಶಾಖಪಟ್ಟಣದಿಂದ ಹೀಗೆ ಗಾಂಜಾ ತರುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

Share Post