HealthInternational

ಸಂಪೂರ್ಣ ತುಂಡಾಗಿದ್ದ ತಲೆಯನ್ನು ಜೋಡಿಸಿದ ವೈದ್ಯರು

ಜೆರುಸಲೆಂ; ಕೈ ಅಥವಾ ಕಾಲು ಸಂಪೂರ್ಣವಾಗಿ ಕಟ್‌ ಆದರೆ ಅದನ್ನು ಮತ್ತೆ ಜೋಡಿಸಿದ ಉದಾಹರಣೆಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಆದ್ರೆ ತಲೆ ಸಂಪೂರ್ಣ ಕಟ್‌ ಆದರೆ ಅದನ್ನು ಜೋಡಿಸಿದ ಉದಾಹರಣೆ ಇಲ್ಲ. ಪುರಾಣಗಳಲ್ಲಿ ಗಣೇಶನಿಗೆ ಆನೆಯ ತಲೆ ಜೋಡಿಸಿದ ಉದಾಹರಣೆಯನ್ನಷ್ಟೇ ನಾವು ಹೇಳಬಹುದು. ಆದ್ರೆ ಇಸ್ರೇಲ್‌ನ ವೈದ್ಯರು ಇಂತಹದ್ದೊಂದು ಸಾಧನೆ ಮಾಡಿದ್ದಾರೆ. ಬಾಲಕನೊಬ್ಬನ ತಲೆ ದೇಹದಿಂದ ಬೇರ್ಪಟ್ಟಿತ್ತು. ವೈದ್ಯರು ಅದನ್ನು ಜೋಡಿಸಿ ಬಾಲಕನನ್ನು ಬದುಕಿಸಿದ್ದಾರೆ ಎನ್ನಲಾಗಿದೆ. ಇಂತಹದ್ದೊಂದು ಸುದ್ದಿ ಹಲವು ಇಂಟರ್‌ ನ್ಯಾಷನಲ್‌ ವೆಬ್‌ಸೈಟ್‌ಗಳಲ್ಲಿ ಬಂದಿದೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಅನ್ನೋದು ಇನ್ನಷ್ಟೇ ಬಯಲಾಗಬೇಕಿದೆ.

ಸುಲೈಮನ್ ಹಸನ್ ಎಂಬ 12 ವರ್ಷದ ಬಾಲಕ ಸೈಕಲ್‍ನಲ್ಲಿ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಆತನ ತಲೆ ಸಂಪೂರ್ಣ ಬೇರ್ಪಟ್ಟಿತ್ತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ವೈದ್ಯರು ಕೂಡಲೇ ಆಪರೇಷನ್‌ ಮಾಡಿ ಬಾಲಕನನ್ನು ಬದುಕಿಸಿದ್ದಾರೆ.

Share Post