ಟೊಮ್ಯಾಟೋ ಬೆಳೆ ಲಕ್ಷ ಲಕ್ಷ ಲಾಭ ಗಳಿಸುತ್ತಿರುವ ಪೊಲೀಸ್ ಕಾನ್ಸ್‌ಟೇಬಲ್
ಹಾಸನ; ಟೊಮ್ಯಾಟೋ ಸೇರಿ ತರಕಾರಿ ಬೆಳೆ ಈಗ ಗನಕ್ಕೇರಿದೆ. ಇದಕ್ಕೆ ಹಲವು ಕಾರಣಗಳಿವೆ. ಟೊಮ್ಯಾಟೋಗೆ ಹೆಚ್ಚಿನ ಕಡೆ ರೋಗ ಬಂದಿರೋದ್ರಿಂದ ಇಳುವರಿ ಸರಿಯಾಗಿ ಬಂದಿಲ್ಲ. ಹೀಗಾಗಿ ಅದರ ರೇಟು ಜಾಸ್ತಿಯಾಗಿದೆ. ಒಂದು ಕೆಜಿ ಟೊಮ್ಯಾಟೋ ಬೆಲೆ ನೂರು ರೂಪಾಯಿ ದಾಟಿದೆ. ಇದರಿಂದಾಗಿ ರೋಗದ ಬರದೆ ಚೆನ್ನಾಗಿ ಬಂದಿರುವ ಟೊಮ್ಯಾಟೋ ತೋಟಗಳ ಮಾಲೀಕರಿಗೆ ಹೆಚ್ಚಿನ ಲಾಭವಾಗುತ್ತಿದೆ. ಹಾಗೆ ಲಾಭ ಪಡೆಯುತ್ತಿರುವವರಲ್ಲಿ ಹಾಸನ ಜಿಲ್ಲೆಯ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್ ಕೂಡಾ ಒಬ್ಬರು.
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿ ಬಸ್ತಿಹಳ್ಳಿಯ ಬೈರೇಶ್ ಎಂಬುವವರೇ ಟೊಮ್ಯಾಟೋ ಬೆಳೆದು ಲಾಭ ಗಳಿಸುತ್ತಿರುವವರು. ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಬೈರೇಶ್, ತಮ್ಮ ಗ್ರಾಮದಲ್ಲಿರುವ 1 ಎಕರೆ 6 ಗುಂಟೆ ಜಾಗದಲ್ಲಿ ಟೊಮ್ಯಾಟೋ ಹಾಕಿಸಿದ್ದಾರೆ. ಇದ್ರಿಂದ ಅವರು ಈಗಾಗಲೇ 20 ಲಕ್ಷ ರೂಪಾಯಿ ಲಾಭ ಮಾಡಿದ್ದಾರೆ. ಇದುವರೆಗೆ ಬೈರೇಶ್ ಸಾವಿರಕ್ಕೂ ಹೆಚ್ಚು ಬಾಕ್ಸ್ ಟೊಮ್ಯಾಟೋ ಮಾರಾಟ ಮಾಡಿದ್ದಾರೆ. ಇನ್ನೂ 20 ಲಕ್ಷ ರೂಪಾಯಿಯಷ್ಟು ಟೊಮ್ಯಾಟೋ ಸಿಗುವ ಭರವಸೆ ಇದೆ.