ಬೆಂಗಳೂರಿನಲ್ಲಿ ಸೇನಾ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ದುರಂತ
ಬೆಂಗಳೂರು; ಬೆಂಗಳೂರಿನಲ್ಲಿ ಸೇನಾ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ್ದು, ಅದೃಷ್ಟವಶಾತ್ ಭಾರಿ ದುರಂತವೊಂದು ತಪ್ಪಿದೆ. ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ಟಾಕಾಫ್ ಆದ ಕೆಲವೇ ಕ್ಷಣಗಳಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಲ್ಯಾಂಡಿಂಗ್ ವೇಳೆ ವಿಮಾನ ಮಗುಚಿ ಬೀಳುವ ಹಂತಕ್ಕೆ ಹೋಗಿದೆ.
HAL ನಿಂದ ಟೇಕ್ ಆಫ್ ಆಗಿದ್ದ VT-KBN ಹೆಸರಿನ 1A ಸೇನಾ ವಿಮಾನ BIALಗೆ ಹೋಗಬೇಕಿತ್ತು. ಆದ್ರೆ ಟೇಕಾಫ್ ಆದ ತಕ್ಷಣ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಪೈಟಲ್ ಹೆಚ್‌ಎಎಲ್‌ನಲ್ಲೇ ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ. ಈ ವೇಳೆ ವಿಮಾನ ಮಗುಚಿ ಬೀಳುವಂತೆ ಆಗಿದೆ. ಮುಂದಿನ ಚಕ್ರದಲ್ಲಿ ದೋಷ ಇದ್ದುದರಿಂದ ಹೀಗೆ ಆಗಿದೆ. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದರು. ಇಬ್ಬರೂ ಸೇಫಾಗಿದ್ದಾರೆ. ಕೇವಲ ಎರಡೇ ಚಕ್ರಗಳಲ್ಲಿ ಸೇನಾ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದ್ದನ್ನು ಕಂಡು ಹೆಚ್‌ಎಎಲ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.