ಪಾವಗಡದಲ್ಲಿ ಬೆಸ್ಕಾಂ ಕಿರಿಯ ಎಂಜಿನಿಯರ್ ನೇಣಿಗೆ ಶರಣು
ತುಮಕೂರು; ಬೆಂಗಳೂರಿನ ಬೆಳ್ಳಂದೂರಿನಲ್ಲಿ ಬೆಸ್ಕಾಂ ಪೂರೌ ವಿಭಾಗದ ಸಹಾಯಕ ಕಿರಿಯ ಎಂಜಿನಿಯರ್ ಎಸ್.ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾವಗಡದ ಖಾಸಗಿ ಲಾಡ್ಜ್ ಒಂದರಲ್ಲಿ ಅವರು ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಅನುಮಾನಗೊಂಡು ಲಾಡ್ಜ್ ಸಿಬ್ಬಂದಿ ಕಿಟಕಿಯಿಂದ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮಂಜುನಾಥ್‌ಗೆ 22 ವರ್ಷ ವಯಸ್ಸಾಗಿತ್ತು. ಅವರು ಬೆಂಗಳೂರಿನಿಂದ ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆಗೆ ಹೋಗಲು ಬಂದಿದ್ದರು. ಆದ್ರೆ ರಾತ್ರಿ ಪಾವಗಡದಲ್ಲಿ ವೈ.ಎನ್.ಹೊಸಕೋಟೆಗೆ ಬಸ್ ಇಲ್ಲ ಎಂದು ಹೇಳಿ ಲಾಡ್ಜ್ ಒಂದರಲ್ಲಿ ರೂಮ್ ಪಡೆದಿದ್ದರು. ಆದ್ರೆ ಇಂದು ಬೆಳಗ್ಗೆ 8 ಗಂಟೆಯಾದರೂ ಅವರು ಕೊಠಡಿಯಿಂದ ಹೊರಕ್ಕೆ ಬಂದಿಲ್ಲ. ಅಷ್ಟೇ ಅಲ್ಲ, ಬಾಗಿಲು ಬಡಿದರೂ ತೆಗೆದಿಲ್ಲ. ಸೌಂಡ್ ಕೂಡಾ ಇರಲಿಲ್ಲ. ಇದರಿಂದ ಅನುಮಾನಗೊಂಡ ಲಾಡ್ಜ್ ಸಿಬ್ಬಂದಿ ಕಟಕಿ ಮೂಲಕ ನೋಡಿದ್ದಾರೆ. ಆಗ ಮಂಜುನಾಥ್ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ಮದುವೆ ವಿಚಾರದಲ್ಲಿ ಮಂಜುನಾಥ್ ಬೇಸರಗೊಂಡಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತನ ಅಣ್ಣ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.