ತಹಸೀಲ್ದಾರ್ ಸಾವಿಗೆ ಸಿಕ್ತು ಕಾರಣ; ಡೆತ್ನೋಟ್ನಲ್ಲಿ ಏನಿದೆ ಗೊತ್ತಾ..?
ಬೆಳಗಾವಿ; ತಹಸೀಲ್ದಾರ್ ಅಶೋಕ್ ಮಣ್ಣಿಕೇರಿ ಸಾವಿಗೆ ಕಾರಣ ಸಿಕ್ಕಿದೆ. ಸಾವಿಗೂ ಮುನ್ನ ಅಶೋಕ್ ಮಣ್ಣಿಕೇರಿಯವರು ಡೆತ್ನೋಟ್ ಬರೆದಿಟ್ಟಿದ್ದು, ತನಿಖಾಧಿಕಾರಿಗಳು ಪರಿಶೀಲನೆ ವೇಳೆ ಈ ಡೆತ್ನೋಟ್ ಪತ್ತೆಯಾಗಿದೆ. ಈ ಡೆತ್ನೋಟ್ನಲ್ಲಿ ತನ್ನ ಸಾವಿಗೆ ಪತ್ನಿಯ ಕಿರುಕುಳವೇ ಕಾರಣ ಎಂದು ಸ್ಪಷ್ಟವಾಗಿ ಬರೆಯಲಾಗಿದೆ ಎಂದು ತಿಳಿದುಬಂದಿದೆ.
ಜೂನ್ 29ರಂದು ಮನೆಯಲ್ಲಿಯೇ ಅಶೋಕ್ ಮಣ್ಣಿಕೇರಿಯವರು ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಅಶೋಕ್ ಅವರು ಮನೆಯವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪತ್ನಿ ಭೂಮಿ ಹಾಗೂ ಅವರ ಸಹೋದರ ಸ್ಯಾಮ್ಯುಯಲ್ ವಿರುದ್ಧ ಆರೋಪ ಮಾಡಿದ್ದರು. ಈ ನಡುವೆ ಪೊಲೀಸರು, ಬೆಳಗಾವಿ ನಗರದ ಎಸಿ ಕಚೇರಿಯಲ್ಲಿ ಲಾಕರ್ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಲಾಕರ್ನಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಜೂನ್ 20ರಂದು ಈ ಡೆತ್ನೋಟ್ ಬರೆದಿಟ್ಟಿದ್ದು, ಇದರಲ್ಲಿ ನನ್ನ ಸಾವಿಗೆ ಪತ್ನಿಯ ಕಿರುಕುಳವೇ ಕಾರಣ ಎಂದು ಹೇಳಲಾಗಿದೆ. ಇನ್ನು ಸ್ವಯಂ ನಿವೃತ್ತಿಗೂ ಪತ್ರ ಸಿದ್ಧಪಡಿಸಲಾಗಿತ್ತು ಎಂದು ತಿಳಿದುಬಂದಿದೆ.
ಅಶೋಕ್ ಮಣ್ಣಿಕೇರಿಯವರು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು ಎಂದು ತಿಳಿದುಬಂದಿದೆ.