ಬಸವನಗುಡಿ ಕಡಲೇಕಾಯಿ ಪರಿಷೆಗೆ ಚಾಲನೆ
ಬೆಂಗಳೂರು : ಬೆಂಗಳೂರಿನ ಸಾಂಸ್ಕೃತಿಕ ಆಚರಣೆಗಳಲ್ಲಿ ಒಂದಾದ ಕಡಲೇಕಾಯಿ ಪರಿಷೆಗೆ ಇಂದಿನಿಂದ ಅಧಿಕೃತ ಚಾಲನೆ ಸಿಕ್ಕಿದೆ. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ ನಡೆಯುವ ಈ ಸಾಂಸ್ಕೃತಿಕ ಹಬ್ಬವು ಮೂರು ದಿನ ನಡೆಯಲಿದೆ.
ಬೆಂಗಳೂರಿನ ಸುತ್ತ ಮುತ್ತ ಹಳ್ಳಿಯ ರೈತರು ತಾವು ಬೆಳೆದಿರುವ ಕಡಲೇಕಾಯಿಗಳನ್ನು ತಂದು ಇಲ್ಲಿ ಮಾರುತ್ತಾರೆ. ಜೊತೆಗೆ ಒಂದಿಷ್ಟು ತಿನಿಸುಗಳು ಮಳಿಗೆಗಳು ಸೇರಿರುತ್ತವೆ. ಬೆಂಗಳೂರು ಮಾತ್ರವಲ್ಲದೆ ಹತ್ತಾರು ಊರುಗಳಿಂದ ಈ ಜಾತ್ರೆ ನೋಡಲು ಜನ ಬರ್ತಾರೆ.
ರಸ್ತೆ ಬದಿಯಲ್ಲಿ ಕಡಲೇಕಾಯಿಗಳ ರಾಶಿ ನೋಡೋದೆ ಒಂದು ಸೊಬಗು. ಕಳೆದ ವರ್ಷ ಕೋವಿಡ್ ಕಾರಣದಿಂದ ಈ ಜಾತ್ರೆ ಅಷ್ಟೇನು ಅದ್ಧೂರಿತನದಿಂದ ಕೂಡಿರಲಿಲ್ಲ.
ಮೂರನೇ ಅಲೇ ಭಯವಿದ್ದರೂ ಜನರು ಗುಂಪು ಗುಂಪಾಗಿ ಬರುತ್ತಿರೋದು ವಿಶೇಷ.