ತೆಲಂಗಾಣದವರು ಭತ್ತ ಕೊಡ್ತಾರೆ, ಛತ್ತಿಸ್‌ಗಢದವರು ಅಕ್ಕಿ ಕೊಡ್ತಾರೆ; ಸಿದ್ದರಾಮಯ್ಯ
ಬೆಂಗಳೂರು; ಕೇಂದ್ರ ಸರ್ಕಾರ ಅಕ್ಕಿ ಕೊಡೋದಿಲ್ಲ ಎಂದು ಹೇಳಿದೆ. ಹೀಗಾಗಿ ನಾವು ಅಕ್ಕಿ ಬೆಳೆಯುವ ರಾಜ್ಯಗಳಿಂದ ಅಕ್ಕಿ ಕೇಳುತ್ತಿದ್ದೇವೆ. ತೆಲಂಗಾಣ ಸರ್ಕಾರ ಭತ್ತ ನೀಡಲು ಒಪ್ಪಿಕೊಂಡಿದೆ. ಇನ್ನೊಂದೆಡೆ ಛತ್ತಿಸ್‌ಗಢ ಸರ್ಕಾರ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡೋದಾಗಿ ಹೇಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆ ಜಾರಿಯ ಮಾಡಿಯೇ ತೀರುತ್ತೇವೆ. ಬಡವರಿಗೆ ಅಕ್ಕಿ ಕೊಟ್ಟೇ ಕೊಡುತ್ತೇವೆ ಎಂದು ಹೇಳಿದ್ದಾರೆ.
ಪಂಜಾಬ್ ಸರ್ಕಾರ ಕೂಡಾ ನವೆಂಬರ್ ತಿಂಗಳಿಂದ ಅಕ್ಕಿ ಪೂರೈಕೆ ಮಾಡೋದಾಗಿ ಹೇಳಿದೆ. ಇನ್ನೊಂದೆಡೆ ಎನ್‌ಸಿಸಿಎಫ್ ಕೇಂದ್ರೀಯ ಭಂಡಾರ, ನಫೆಡ್‌ನಿಂದಲೂ ನಾವು ಕೊಟೇಷನ್ ಕೇಳಿದ್ದೇವೆ. ಅವರ ದರ, ಅಕ್ಕಿಯ ಗುಣಮಟ್ಟ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ ಬಡಜನರಿಗೆ ಉಚಿತ ಅಕ್ಕಿ ನೀಡೋದಾಗಿ ನಾವು ಈ ಯೋಜನೆ ಜಾರಿ ಮಾಡಿದ್ದೇವೆ. ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ ಹೋಂದಿರುವವರಿಗೆ ತಲಾ ಹತ್ತು ಕೆಜಿ ಅಕ್ಕಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯಕ್ಕೆ ಸುಮಾರು 2 ಲಕ್ಷದ 29 ಸಾವಿರ ಮೆಟ್ರಿಕ್ ಟನ್ ಅಕ್ಕಿ ಬೇಕಾಗುತ್ತದೆ. ಪಂಜಾಬ್ ಹಾಗೂ ಆಂಧ್ರಪ್ರದೇಶದ ಬಳಿ ಅಕ್ಕಿಯ ಸ್ಟಾಕ್ ಇಲ್ಲ. ಹೀಗಾಗಿ ನಮಗೆ ತೊಂದರೆಯಾಗಿದೆ. ಹೀಗಾಗಿಯೇ ಸರ್ಕಾರಿ ಸಂಸ್ಥೆಗಳಿಂದ ಕೊಟೇಷನ್ ಕೇಳಿದ್ದೇವೆ. ನೆಗೋಷಿಯೇಷನ್ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದ್ದಾರೆ.