CrimeNational

ಕುಸಿದುಬಿದ್ದ 6 ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಸ್ಟೇಡಿಯಂ

ಮೇಘಾಲಯ; ಮೇಘಾಲಯದಲ್ಲಿ ಆರು ತಿಂಗಳ ಹಿಂದಷ್ಟೇ ಬೃಹತ್‌ ಫುಟ್ಬಾಲ್‌ ಸ್ಟೇಡಿಯಂ ಅನ್ನು ಉದ್ಘಾಟಿಸಲಾಗಿತ್ತು. ಆದ್ರೆ ಅದು ಅದಾಗಲೇ ಕುಸಿದುಬಿದ್ದಿದೆ. ಇನ್ನೂ ಸರಿಯಾಗಿ ಅದನ್ನು ಕ್ರೀಡಾಪಟು ಉಪಯೋಗಿಸಿಕೊಂಡೇ ಇಲ್ಲ. ಆಗಲೇ ನೂರಾರು ಕೋಟಿ ರೂಪಾಯಿ ಮಣ್ಣುಪಾಲಾಗಿದೆ.

ತುರಾ ಹಾಗೂ ವೆಸ್ಟ್​ ಗಾರೋ ಹಿಲ್ಸ್ ಪ್ರದೇಶದಲ್ಲಿ ಭಾರಿ ಮಳೆಯಾಗಿದ್ದು, ಇದರಿಂದಾಗಿ ಸ್ಟೇಡಿಯಂನ ತಡೆಗೋಡೆ ಕುಸಿದುಬಿದ್ದಿದೆ. ಅಂದಹಾಗೆ ಈ ಸ್ಟೇಡಿಯಂ ಅನ್ನು ಸುಮಾರು 127 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಮೇಘಾಲಯ ಸಿಎಂ ಕೊನ್ರಾಡ್ ಕೆ ಸಂಗ್ಮಾ ಇದನ್ನು ಉದ್ಘಾಟನೆ ಮಾಡಿದ್ದರು. ಆದ್ರೆ ಇದೀಗ ಮಳೆಯಿಂದಾಗಿ ಇದರ ತಡೆಗೋಡೆ ಕುಸಿದಿದೆ. ಹೀಗಾಗಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ವರ್ಷ ಕೂಡಾ ಮೇಘಾಲಯದಲ್ಲಿ ಅನಾಹುತ ನಡೆದಿತ್ತು. ಹೊಸದಾಗಿ ನಿರ್ಮಾಣವಾಗುತ್ತಿದ್ದ ವಿಧಾನಸಭೆಯ ಕಟ್ಟಡದ ಒಂದು ಭಾಗ ಕುಸಿದಿತ್ತು. ಜೊತೆಗೆ ಅದರ ಗುಮ್ಮಟದ ಭಾಗ ಕೂಡಾ ಕುಸಿದುಬಿದ್ದಿತ್ತು.

Share Post