ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಸವಾರನ ದೇಹ ತುಂಡು ತುಂಡು
ಮಡಿಕೇರಿ; ಮಡಿಕೇರಿ ಬಳಿ ಭೀಕರ ಅಪಘಾತ ಸಂಭವಿಸಿದೆ. ಹತ್ತು ಚಕ್ರದ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ದೇಹ ಎರಡು ತುಂಡಾಗಿದೆ.
ಕುಶಾಲನಗರದ ಕೂಡ್ಲೂರು ಬಳಿ ಈ ದುರಂತ ನಡೆದಿದೆ. ಮೃತ ವ್ಯಕ್ತಿಯನ್ನು ಗಂಗಾಧರ್ ಎಂದು ಗುರುತಿಸಲಾಗಿದ್ದು, ಈತ ಹಾಸನ ಜಿಲ್ಲೆ ಅರಸೀಕೆರೆಯವನು ಎಂದು ತಿಳಿದುಬಂದಿದೆ. ಕುಶಾಲನಗರದಲ್ಲಿ ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ ಗಂಗಾಧರ್ ಮನೆಗೆ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಗಂಗಾಧರ್ ದೇಹದ ಮೇಲೆ ಬೃಹತ್ ಲಾರಿಯ ಚಕ್ರ ಹರಿದಿದ್ದರಿಂದ ದೇಹ ಎರಡು ತುಂಡಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.