CrimeDistricts

ಮಹಿಳೆಯರ ಜೊತೆ ಅನುಚಿತ ವರ್ತನೆ ಆರೋಪ; ಕಂಡಕ್ಟರ್‌ಗೆ ಬಿತ್ತು ಗೂಸಾ

ಚಿತ್ರದುರ್ಗ; ಮಹಿಳಾ ಪ್ರಯಾಣಿಕರ ಜೊತೆ ಅನುಚಿತ ವರ್ತನೆ ತೋರಿದ ಆರೋಪದ ಮೇಲೆ ಸಾರಿಗೆ ಬಸ್‌ ಕಂಡಕ್ಟರ್‌ ಮೇಲೆ ಮಹಿಳೆಯ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆ ಚಳ್ಳಕೆರೆ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಚಂದ್ರೇಗೌಡ ಎಂಬ ಕಂಡಕ್ಟರ್‌ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ.

ಚಳ್ಳಕೆರೆಯಿಂದ ಬೆಂಗಳೂರು ಮಾರ್ಗದ ಈ ಬಸ್‌ನಲ್ಲಿ ಮಹಿಳೆ ಪ್ರಯಾಣ ಮಾಡಿದ್ದಳು. ಆಕೆ ಡಾಬಸ್‌ ಪೇಟೆಯಲ್ಲಿ ಇಳಿಯಬೇಕಿತ್ತು. ಆದ್ರೆ, ಡಾಬಸ್‌ ಪೇಟೆಯಲ್ಲಿ ಸ್ಟಾಪ್‌ ಇಲ್ಲ ಎಂದು ಬಸ್‌ ನಿಲ್ಲಿಸದೇ ಮಹಿಳೆಯನ್ನು ಬೆಂಗಳೂರಿನ ಮೆಜೆಸ್ಟಿಕ್‌ಗೆ ತಂದಿಳಿಸಿದ್ದಾರೆ. ಈ ವೇಳೆ ಮಹಿಳೆ ಕಂಡಕ್ಟರ್‌ ಜೊತೆ ಜಗಳವಾಡಿದ್ದಾಳೆ. ಆಗ ಕಂಡಕ್ಟರ್‌ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಇತ್ತ ಮಹಿಳೆ ಚಳ್ಳಕೆರೆಗೆ ವಾಪಸ್‌ ಹೋಗಿ ಸಂಬಂಧಿಕರ ಜೊತೆ ಅನುಚಿತ ವರ್ತನೆ ತೋರಿದ ಕಂಡಕ್ಟರ್‌ ಇರುವ ಬಸ್‌ ಬರುವವರೆಗೆ ಕಾದಿದ್ದಾರೆ. ಬಸ್‌ ಬರುತ್ತಿದ್ದಂತೆ ಕಂಡಕ್ಟರ್‌ ಮೇಲೆ ಎಲ್ಲರೂ ಸೇರಿ ಹಲ್ಲೆ ಮಾಡಿದ್ದಾರೆ. ಸದ್ಯ ನಿರ್ವಾಹಕನನ್ನು ಆಸ್ಪತ್ರೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

Share Post