ಆಪರೇಷನ್ ರಾಜಕಾಲುವೆ ಒತ್ತುವರಿ ಶುರು; ಎಲ್ಲೆಲ್ಲಿ ತೆರವು ಕಾರ್ಯಾಚರಣೆ..?
ಬೆಂಗಳೂರು; ಬೆಂಗಳೂರಿನಲ್ಲಿ ಮತ್ತೆ ಆಪರೇಷನ್ ರಾಜಕಾಲುವೆ ಒತ್ತುವರಿ ಶುರುವಾಗಿದೆ. ಇಂದಿನಿಂದ ಬಿಬಿಎಂಪಿ ವತಿಯಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಎಲ್ಲೆಡೆ ಜೆಸಿಬಿಗಳು ಗರ್ಜಿಸುತ್ತಿವೆ. ಮುಂದಿನ 15 ದಿನಗಳಲ್ಲಿ 100 ಒತ್ತುವರಿಗಳು ತೆರವಿಗೆ ಬಿಬಿಎಂಪಿ ಅಧಿಕಾರಿಗಳು ಟಾರ್ಗೆಟ್ ಹಾಕಿಕೊಂಡಿದ್ದಾರೆ.
ಇಂದು ಮಹದೇವಪುರ ಹಾಗೂ ಕೆ.ಆರ್.ಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಶುರುವಾಗಿದೆ. ಒಟ್ಟು ಬೆಂಗಳೂರಿನಾದ್ಯಂತ 571 ಕಡೆ ರಾಜಕಾಲುವೆ ಒತ್ತುವರಿಯಾಗಿದೆ. ಹಂತ ಹಂತವಾಗಿ ಎಲ್ಲಾ ಒತ್ತುವರಿಗಳನ್ನೂ ತೆರವು ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಆಸ್ತಿಗಳ ಮಾಲೀಕರಿಗೆ ಈ ಬಗ್ಗೆ ನೋಟಿಸ್ ಕೂಡಾ ಜಾರಿ ಮಾಡಲಾಗಿದೆ.
ಮಹಾದೇವಪುರ ವ್ಯಾಪ್ತಿಯ ಮೊನೆನುಕೊಳಲು ಬಳಿಯ ಸ್ಪೈಸ್ ಗಾರ್ಡನ್‌ನಲ್ಲಿ ಉತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿ ಒಟ್ಟು 22 ಬಿಲ್ಡಿಂಗ್‌ಗಳನ್ನ ಮಾರ್ಕ್ ಮಾಡಲಾಗಿದೆ. ಇದರಲ್ಲಿ ಹಲವು ನಿರ್ಮಾಣ ಹಂತದ ಕಟ್ಟಡಗಳಿವೆ. ಕಾಂಪೌಂಡ್ ಗೋಡೆಗಳು, ಸೈಟ್‌ಗಳು ಇವೆ.