Bengaluru

ಜೂನ್‌ 18ರಿಂದ 22ರವರೆಗೆ ಬಿರುಗಾಳಿ ಸಹಿತ ಮಳೆ; ಹಳೇ ಮೈಸೂರು, ಬೆಂಗಳೂರು ಭಾಗಕ್ಕೆ ಎಚ್ಚರಿಕೆ

ಬೆಂಗಳೂರು; ಜೂನ್‌ 18ರಿಂದ 22ರವರೆಗೆ ಬೆಂಗಳೂರು ಸೇರದಂತೆ ರಾಜ್ಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಿರುಗಾಳಿ ಸಹಿತ ಭಾರೀ ಮಳೆಯಾಗುವುದರಿಂದ ನಗರ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲೂ ಈ ಐದು ದಿನಗಳೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.

ಹಳೆ ಮೈಸೂರು ಭಾಗದಲ್ಲಿ ಮಳೆ ಹೆಚ್ಚಾಗಿ ಸುರಿಯಲಿದೆ. ಬೆಂಗಳೂರು, ಕೋಲಾರ, ರಾಮನಗರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆಯಂತೆ. ರಾಮನಗರ ಮತ್ತು ಮಂಗಳೂರು ಭಾಗದಲ್ಲಿ 150 ಮಿಲಿಮೀಟರ್‌ ನಷ್ಟು ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ನಗರದಲ್ಲಿ ಜನರು ಈ ಐದು ದಿನಗಳಲ್ಲಿ ಮನೆಯಿಂದ ಅನಗತ್ಯವಾಗಿ ಹೊರಬರುವುದು ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆ ಸಮಯದಲ್ಲಿ ಆದಷ್ಟು ಅಂಡರ್‌ಪಾಸ್‌ಗಳಲ್ಲಿ ಸಂಚಾರ ಮಾಡಬೇಡಿ ಎಂದೂ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

Share Post