BengaluruDistricts

11 ತಿಂಗಳ ಮಗುವನ್ನು ಬಿಟ್ಟು ಫ್ರೀ ಬಸ್‌ನಲ್ಲಿ ಪ್ರಿಯಕರನನ್ನು ನೋಡಲು ಬಂದ ಮಹಿಳೆ..!

ಮಂಗಳೂರು; ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಇದನ್ನು ಹಲವು ಹಲವು ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇಲ್ಲೊಬ್ಬ ಮಹಿಳೆ, ತನ್ನ ಪ್ರಿಯಕರನನ್ನು ನೋಡಲು 11 ತಿಂಗಳ ಮಗುವನ್ನು ಬಿಟ್ಟು ಬಸ್‌ನಲ್ಲಿ ಬಂದಿದ್ದಾಳೆ. ಹುಬ್ಬಳ್ಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮಹಿಳೆ ಬಂದಿದ್ದಾಳೆ. ಇದೀಗ ಈ ಮಹಿಳೆ ನಾಪತ್ತೆಯಾಗಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಹುಬ್ಬಳ್ಳಿ ಮೂಲದ ಮಹಿಳೆ, ತವರು ಮನೆಯಲ್ಲಿ 11 ತಿಂಗಳ ಮಗುವನ್ನು ಬಿಟ್ಟು ಪುತ್ತೂರಿಗೆ ಬಂದಿದ್ದಾಳೆ. ಆಕೆ ತನ್ನ ತವರು ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳಂತೆ. ಆತ ಪುತ್ತೂರಿನ ಕೋಡಿಂಬಾಡಿಯ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಆತನನ್ನು ಹುಡುಕಿಕೊಂಡು ಪುತ್ತೂರಿಗೆ ಉಚಿತ ಬಸ್‌ನಲ್ಲಿ ಬಂದಿದ್ದಾಳೆ. ಮನೆಯವರು ಕರೆ ಮಾಡಿದರೆ ಆಕೆ ಸ್ವೀಕಾರ ಮಾಡುತ್ತಿರಲಿಲ್ಲ. ಅನುಮಾನಗೊಂಡು ಪ್ರಿಯಕರ ಇದ್ದ ಪುತ್ತೂರಿಗೆ ಹುಡುಕಿಕೊಂಡು ಬಂದಿದ್ದಾರೆ. ಆದ್ರೆ ಅಲ್ಲಿ ಪ್ರಿಯಕರ ಕೂಡಾ ಕಾಣಿಸುತ್ತಿಲ್ಲ. ಮಹಿಳೆಯೂ ಸಿಗುತ್ತಿಲ್ಲ.

ಗಂಡನ ಆಧಾರ್‌ ಲಿಂಕ್‌ ಮಾಡಿಸುತ್ತೇನೆ ಎಂದು ಆಧಾರ್‌ ಕಾರ್ಡ್‌ ತೆಗೆದುಕೊಂಡು ಬಂದಿದ್ದ ಮಹಿಳೆ ಈಗ ಎಸ್ಕೇಪ್‌ ಆಗಿದ್ದಾಳೆ. ಆದ್ರೆ ಆಕೆ ಅದನ್ನು ಕಂಡಕ್ಟರ್‌ಗೆ ತೋರಿಸಲು ತಂದಿದ್ದಳು ಎನ್ನಲಾಗಿದೆ. ಸದ್ಯ ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share Post