ಗೃಹಜ್ಯೋತಿ ಅರ್ಜಿ ಪ್ರಕ್ರಿಯೆ ಮುಂದೂಡಿಕೆ; ಜೂನ್ 18ರಿಂದ ಅರ್ಜಿ ಸಲ್ಲಿಕೆ
ಬೆಂಗಳೂರು; ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇದೇ ಜೂನ್ 15ರಿಂದ ಅವಕಾಶ ನೀಡಲಾಗಿತ್ತು. ಆದ್ರೆ. ಇದೀಗ ಸರ್ಕಾರ ದಿನಾಂಕವನ್ನು ಮುಂದೂಡಿದೆ. ಜೂನ್ 18 ರಿಂದ ಸೇವಾ ಸಿಂಧು ಅಪ್ಲಿಕೇಷನ್ ಮೂಲಕ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಹೇಳಿದೆ.
ಜೂನ್ 15 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದ್ರೆ ತಾಂತ್ರಿಕ ದೋಷದ ಕಾರಣದಿಂದ ಅರ್ಜಿ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಸೇವಾ ಸಿಂಧು ಆಪ್ನಲ್ಲಿ ಇನ್ನೂ ತಾಂತ್ರಿಕ ದೋಷ ಇರುವುದರಿಂದ ಜೊತೆಗೆ ತಾಂತ್ರಿಕ ಸಿಬ್ಬಂದಿ ಸಜ್ಜಾಗದೇ ಇರುವುದರಿಂದ ದಿನಾಂಕವನ್ನು ಮುಂದೂಡಲಾಗಿದೆ.