ಸ್ವಯಂ ವಿವಾಹಿತೆ ಕ್ಷಮಾ ಬಿಂದುಗೆ ಆನಿವರ್ಸರಿ
ಗಾಂಧಿನಗರ; ತನ್ನನ್ನ ತಾನೇ ಮದುವೆಯಾಗುತ್ತೇನೆ ಎಂದು ಹೇಳಿ ದೇಶಾದ್ಯಂತ ಸುದ್ದಿಯಾಗಿದ್ದ ಗುಜರಾತ್ನ ವಡೋದರಾದ ಕ್ಷಮಾ ಬಿಂದು, ಸ್ವಯಂ ಮದುವೆಯಾಗಿ ವರ್ಷ ತುಂಬಿದೆ. ಕಳೆದ ವರ್ಷ ಜೂನ್ 8ರಂದು ಅವರು ತಮ್ಮನ್ನು ತಾವೇ ವಿವಾಹವಾಗಿದ್ದರು. ಮೊನ್ನೆಗೆ ಒಂದು ವರ್ಷವಾಗಿದ್ದು, ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.
ಇದೀಗ ಒಂದು ವರ್ಷದ ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಕ್ಷಮಾ ಬಿಂದು ಅವರು, ಸೋಲೋಗಮಿ ಪದ್ಧತಿಯಲ್ಲಿ ತಮ್ಮನ್ನು ತಾವೇ ಮದುವೆಯಾಗಿದ್ದರು. ಇದಕ್ಕೆ ಸ್ನೇಹಿತರು, ಆಪ್ತರು ಸಾಕ್ಷಿಯಾಗಿದ್ದರು. ಕೆಲವರು ಇಂತಹ ಮದುವೆಗೆ ವಿರೋಧ ಕೂಡಾ ವ್ಯಕ್ತಪಡಿಸಿದ್ದರು. ಈ ನಡುವೆ ಕ್ಷಮಾ ಮದುವೆಯಾಗಿ ಒಂದು ವರ್ಷ ಪೂರೈಸಿದ್ದಾರೆ. ಒಂದು ವರ್ಷ ನನಗೆ ಖುಷಿ ತರಿಸಿದೆ. ನಾನು ತುಂಬಾ ಖುಷಿಯಾಗಿ ವೈವಾಹಿಕ ಜೀವನ ನಡೆಸಿದ್ದೇನೆ ಎಂದು ಕ್ಷಮಾ ಬಿಂದು ಹೇಳಿಕೊಂಡಿದ್ದಾರೆ.