BengaluruPolitics

ಗೃಹಜ್ಯೋತಿ; 20 ದಿನದಲ್ಲಿ 2.15 ಕೋಟಿ ಅರ್ಜಿ ಸಲ್ಲಿಕೆ ಸಾಧ್ಯವೇ..? – ತಲೆ ಚಚ್ಕೋಬೇಕು..!

ಬೆಂಗಳೂರು; ಯಾವುದಾದರೂ ಒಂದು ಕೆಲಸಕ್ಕೆ ಅರ್ಜಿ ಕರೆದಾಗ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಲು ನಿರುದ್ಯೋಗಿಗಳು ಮುಗಿಬೀಳ್ತಾರೆ. ಒಂದೇ ಸಮಯದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿಬಿಟ್ಟರೆ ವಯಬ್‌ಸೈಟ್‌ ಹ್ಯಾಂಗ್‌ ಆಗಿಬಿಡುತ್ತದೆ. ಅಂತಹದ್ದರಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ ಎರಡೂ ಕಾಲು ಕೋಟಿ ಜನರು ಅರ್ಜಿ ಸಲ್ಲಿಸಬೇಕು. ಇದಕ್ಕೆ ಇರೋದು ಕೇವಲ 20 ದಿನಗಳ ಕಾಲಾವಕಾಶ. ಜೂನ್ 15 ರಿಂದ ಜುಲೈ 05 ರೊಳಗೆ ಅರ್ಜಿ ಸಲ್ಲಿಕೆ ಕಂಪ್ಲೀಟ್‌ ಆಗಬೇಕು. ಆದ್ರೆ ಇದು ನಿಜಕ್ಕೂ ಸಾಧ್ಯವಾ ಎಂಬ ಪ್ರಶ್ನೆ ಮೂಡಿದೆ.

ಸೇವಾ ಸಿಂಧು ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ ಸಿದ್ಧವಾಗಬೇಕು. ಅದರಲ್ಲಿ ಯಾವುದೂ ತಾಂತ್ರಿಕ ತೊಂದರೆ ಎದುರಾಗಬಾರದು. ಎಲ್ಲವೂ ಸರಿಯಾಗಿ ನಡೆದರೂ, ಕೇವಲ 20 ದಿನದಲ್ಲಿ ಎರಡೂ ಕಾಲು ಅಪ್ಲಿಕೇಷನ್‌ ಸಲ್ಲಿಸೋದಕ್ಕೆ ಆಗೋದು ಕಷ್ಟ. ಒಂದು ವೇಳೆ ಹೀಗೆ ಲಕ್ಷ ಲಕ್ಷ ಜನ ಒಂದೇ ಸಮಯದಲ್ಲಿ ಅರ್ಜಿ ಸಲ್ಲಿಸೋಕೆ ಹೊರಟರೆ ಸರ್ವರ್‌ ಸಮಸ್ಯೆ ಆಗಬಹುದು. ಇದರಿಂದ ಕಷ್ಟವಾಗಬಹುದು ಎಂದು ತಾಂತ್ರಿಕ ನಿಪುಣರು ಹೇಳಿದ್ದಾರೆ.

ತಜ್ಞರ ಪ್ರಕಾರ ಕನಿಷ್ಠ 50 ದಿನಗಳ ಸಮಯವಾದರೂ ಬೇಕು. ಆದ್ರೆ ಸರ್ಕಾರ ತರಾತುರಿಯಲ್ಲಿ ಈ ಕೆಲಸ ಮಾಡುತ್ತಿದೆ. ಇದರಿಂದ ತೊಂದರೆಯಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ. ಅಪಾರ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಹೀಗಾಗಿ, ಅದಕ್ಕನುಗುಣವಾಗಿ ಸೇವಾ ಸಿಂಧು ಪೋರ್ಟಲ್‌ ನ ಸಾಮರ್ಥ್ಯ ವೃದ್ಧಿಸುವಂತೆ ಇ-ಆಡಳಿತ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಆದ್ರೆ, ಅಧಿಕಾರಿಗಳು ಎಷ್ಟರ ಮಟ್ಟಿಗೆ ಸಿಎಂ ಸೂಚನೆಗಳನ್ನು ಪಾಲನೆ ಮಾಡುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

Share Post