BengaluruCinemaLifestyle

ಜೂನ್‌ 5ಕ್ಕೆ ಅಂಬಿ ಪುತ್ರನ ಮುದವೆ; ನೆರವೇರಿತು ಅರಿಶಿನ ಶಾಸ್ತ್ರ

ಬೆಂಗಳೂರು; ರೆಬೆಲ್‌ ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ ಅಂಬರೀಶ್‌ ಮದುವೆಗೆ ಇನ್ನು ಮೂರು ದಿನ ಬಾಕಿ ಇದೆ. ಈಗಾಗಲೇ ಮದುವೆ ಶಾಸ್ತ್ರಗಳು ಶುರುವಾಗಿವೆ. ಇಂದು ಅರಶಿನ ಶಾಸ್ತ್ರ ನೆರವೇರಿದ್ದು, ಫೋಟೋಗಳನ್ನು ಎಲ್ಲೆಡೆ ವೈರಲ್‌ ಆಗುತ್ತಿವೆ.

ಅಭಿಷೇಕ್ ಅಂಬರೀಶ್- ಅವಿವ ಬಿದ್ದಪ್ಪ ಜೋಡಿ ಜೂನ್‌ ಐದರಂದು ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.  ಜೂನ್ 4ರ ಭಾನುವಾರ ಅಂಬರೀಶ್‌ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ 9:30-10:30ಕ್ಕೆ ಮದುವೆ ನಡೆಯಲಿದೆ. ಜೂನ್ 7 ರಂದು ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ

2022ರ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನಡೆದಿತ್ತು.

Share Post