CrimeNational

BSF ಯೋಧರ ಭರ್ಜರಿ ಕಾರ್ಯಾಚರಣೆ; 13 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶ

ಕರೀಂಗಂಜ್: ಅಸ್ಸಾಂನ ಕರೀಂಗಂಜ್‌ನಲ್ಲಿ ಬಿಎಸ್‌ಎಫ್‌ ಯೋಧರು ಹಾಗೂ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಡ್ರಗ್ಸ್‌ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು, ಬಂಧಿತನಿಂದ 13 ಕೋಟಿ ರೂಪಾಯಿ ಮೌಲ್ಯದ 2.59 ಲಕ್ಷ ಯಬಾ ಟ್ಯಾಬ್ಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಯಬಾ ಗುಳಿಗೆ ರೂಪದಲ್ಲಿರುವ ಡ್ರಗ್‌ ಆಗಿದ್ದು, ದಕ್ಷಿಣ ಏಷ್ಯಾದಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ. ಈ ಡ್ರಗ್‌ಗೆ ನಿಷೇಧವಿದ್ದರೂ, ಅಕ್ರಮವಾಗಿ ಇದನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಿಎಸ್‌ಎಫ್‌ ಹಾಗೂ ಅಸ್ಸಾಂ ಪೊಲೀಸರು, ಆರೋಪಿಯೊಬ್ಬನನ್ನು ಮಾಲು ಸಮೇತ ಬಂಧಿಸಿದ್ದಾರೆ.

ಯಬಾ ಗುಳಿಗೆಯನ್ನು ಮೊದಲು ಯಮ ಎಂದು ಕರೆಯಲಾಗುತ್ತಿತ್ತು. ಮೆಟಾಫೆಟಾಮಿನ್‌ ಮತ್ತು ಕೆಫೀನ್‌ ಮಿಶ್ರಣವೇ ಈ ಯನಾ ಗುಳಿಗೆ ಎಂದು ತಿಳಿದುಬಂದಿದೆ. ಈ ಡ್ರಗ್ಸ್‌ ದಂಧೆ ಇನ್ನೂ ಯಾರ್ಯಾರಿದ್ದಾರೆ. ಈ ವ್ಯಕ್ತಿಗೆ ಇಷ್ಟು ದೊಡ್ಡ ಪ್ರಮಾಣ ಗುಳಿಗೆಗಳನ್ನು ನೀಡಿದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share Post