ಶುಕ್ರವಾರವೇ 5 ಗ್ಯಾರೆಂಟಿ ಘೋಷಣೆ ಸಾಧ್ಯತೆ..?; ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯುತ್ತಾ..?
ಬೆಂಗಳೂರು; ಐದು ಗ್ಯಾರೆಂಟಿಗಳು ಜಾರಿಗೆ ಬರುವ ಸಮಯ ಹತ್ತಿರ ಬಂದಿದೆ. ಇದೇ ಶುಕ್ರವಾರ ನಡೆಯುವ ಸಂಪುಟ ಸಭೆಯ ಬಳಿಕ ಐದು ಗ್ಯಾರೆಂಟಿಗಳು ಜಾರಿಯಾಗಲಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಗ್ಯಾರೆಂಟಿಗಳಿಗೆ ಯಾವ ಷರತ್ತುಗಳು ಇರುತ್ತವೆ ಅನ್ನೋದು ಮಾತ್ರ ಇನ್ನೂ ಕುತೂಹಲವಾಗಿಯೇ ಉಳಿದಿವೆ.
ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಐದೂ ಗ್ಯಾರೆಂಟಿಗಳ ಜಾರಿಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅನಂತರ, ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ, ಗ್ಯಾರೆಂಟಿಗಳ ಘೋಷಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇನ್ನು ಈ ಐದು ಗ್ಯಾರೆಂಟಿಗಳ ಘೋಷಣೆಗೆ ಸಾಂಕೇತಿಕವಾಗಿ ಸಮಾರಂಭ ಮಾಡಲೂ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆಯವರನ್ನು ಕರೆಸಿ ಅವರ ಸಮ್ಮುಖದಲ್ಲಿ ಗ್ಯಾರೆಂಟಿಗಳ ಜಾರಿ ಮಾಡಲಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದ್ರೆ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.