Crime

ಉತ್ತರ ಪ್ರದೇಶ : 3ನೇ ತರಗತಿ ಬಾಲಕಿಯ ಮೇಲೆ ಅತ್ಯಾಚಾರ

ಲಖನೌ : ಮೂರನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಶಾಲೆಯ ಶೌಚಾಲಯದಲ್ಲಿ ಸ್ವಚ್ಛತಾ ಕೆಲಸಗಾರ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ವಾರನಾಸಿ ನಗರದಲ್ಲಿ ನಡೆದಿದೆ. ಆರೋಪಿಯನ್ನು ಅಜಯ್‌ ಕುರ್ಮಾ ಎಂದು ಗುರುತಿಸಲಾಗಿದ್ದು, ಮಾನಸ ನಗರದಲ್ಲಿರುವ ಆತನ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

ಶುಕ್ರವಾರ ಬಾಲಕಿಯು ಶೌಚಾಲಯಕ್ಕೆ ಹೋಗಿದ್ದಾಗ ಒಳನುಗ್ಗಿದ ಸ್ವಚ್ಛತಾ ಕೆಲಸಗಾರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ಯಾರಿಗಾದರು ಹೇಳಿದರೆ ಹೊಡೆಯುವುದಾಗಿ ಸಂತ್ರಸ್ತ ಬಾಲಕಿಯನ್ನು ಹೆದರಿಸಿದ್ದ ಕಾರಣ ಬಾಲಕಿಯು ಶಿಕ್ಷಕರಿಗೆ ತಿಳಿಸಿಲ್ಲ.

ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Share Post