Explainer; ನೋಟು ನಿಷೇಧವಾ..?, ಹಿಂತೆಗೆತವಾ..?; 2000 ರೂ. ಹಿಂತೆಗೆತ ಹಿಂದಿನ ಉದ್ದೇಶವೇನು..?
ಬೆಂಗಳೂರು; 2018ರ ಸೆಪ್ಟೆಂಬರ್ 8ರಂದು ಐದು ನೂರು ಹಾಗೂ ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿ, ಹೊಸ 500 ಹಾಗೂ 2000 ರೂಪಾಯಿ ನೋಟುಗಳನ್ನು ಮಾರುಕಟ್ಟೆಗೆ ಬಿಡಲಾಗಿತ್ತು. ಆದ್ರೆ ಇದೀಗ 2000 ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುತ್ತಿರೋದಾಗಿ ಆರ್‌ಬಿಐ ಹೇಳಿದೆ. ಸೆಪ್ಟೆಂಬರ್ 30ರೊಳಗೆ ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಷ್ಟರೊಳಗೆ ಬದಲಾವಣೆ ಮಾಡಿಕೊಳ್ಳಲಿದ್ದರೆ, ಅವು ನಮ್ಮ ಬಳಿ ಇದ್ದರೂ ಚಲಾವಣೆ ಮಾಡೋದಕ್ಕೆ ಆಗೋದಿಲ್ಲ.
ಕಳೆದ ಬಾರಿ ನೋಟು ಅಮಾನ್ಯ ಮಾಡಿದಾಗ ಜನರು ಸಾಕಷ್ಟು ತೊಂದರೆಗೊಳಗಾಗಿದ್ದರು. ಇದೀಗ 2 ಸಾವಿರ ರೂಪಾಯಿ ನೋಟುಗಳು ಹಿಂತೆಗೆದುಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ.
2000 ರೂಪಾಯಿ ನೋಟುಗಳ ಚಲಾವಣೆ ನಿಲ್ಲಿಸಿಲ್ಲ. ಸೆಪ್ಟೆಂಬರ್ 30 ರವರೆಗೆ ಈ ನೋಟುಗಳನ್ನು ಚಲಾವಣೆ ಮಾಡಬಹುದು. ಜೊತೆಗೆ ಬ್ಯಾಂಕ್ ನಲ್ಲಿ ಬದಲಾವಣೆ ಮಾಡಿಕೊಳ್ಳಲು ಕೂಡಾ ಅವಕಾಶ ನೀಡಲಾಗಿದೆ. ಹೀಗಾಗಿ ಈ ನೋಟುಗಳಿಗೆ ಸೆಪ್ಟೆಂಬರ್ 30 ರವರೆಗೆ ಮಾನ್ಯತೆ ಇರುತ್ತದೆ.
ನಾವು ಅಕೌಂಟ್‌ನಲ್ಲಿ ಜಮೆ ಮಾಡುವುದಾದರೆ ಎಷ್ಟೇ ನೋಟುಗಳಿದ್ದರೂ ಜಮೆ ಮಾಡಬಹುದು. ಆದ್ರೆ ಕ್ಯಾಶ್ ರೂಪದಲ್ಲೇ ಬದಲಾಯಿಸಿಕೊಳ್ಳಬೇಕೆಂದರೆ ದಿನಕ್ಕೆ 20000 ರೂಪಾಯಿವರೆಗೂ ಅಂದರೆ ದಿನಕ್ಕೆ ಹತ್ತು ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಅಷ್ಟೇ. ಇನ್ನು ಠೇವಣಿ ಇಡೋದಕ್ಕೆ, ಅಕೌಂಟ್‌ನಲ್ಲಿ ಜಮೆ ಮಾಡೋದಕ್ಕೆ ಯಾವುದೇ ನಿರ್ಬಂಧ ಇಲ್ಲ. ಆದ್ರೆ, ಜಮೆ ಮಾಡಬೇಕು ಅಂದ್ರೆ ಅದು ವೈಟ್ ಮನಿಯೇ ಆಗಿರಬೇಕು. ಇದು ಬ್ಲ್ಯಾಕ್ ಮನ ಹೊಂದಿರವವರೆ ಸಮಸ್ಯೆಗೆ ಕಾರಣವಾಗಿದೆ.
ಇನ್ನು 2000 ನೋಟುಗಳ ಬದಲಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ. ಉಚಿತವಾಗಿಯೇ ಬದಲಾವಣೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ. ನಕಲಿ ನೋಟುಗಳ ಹಾವಳಿ ತಡೆಯೋದಕ್ಕಾಗಿ ಹಾಗೂ ಕಪ್ಪು ಹಣವನ್ನು ತಡೆಯೋದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮೂರು ವರ್ಷಗಳಿಂದ 2000 ರೂಪಾಯಿ ನೋಟುಗಳ ಮುದ್ರಣ ಹಾಗೂ ಬ್ಯಾಂಕ್‌ಗಳಿಂದ ವಿತರಣೆ ನಿಲ್ಲಿಸಿದ್ದರಿಂದ ಬಹುತೇಕ ನೋಟುಗಳನ್ನು ಈಗಾಗಲೇ ಹಿಂಪಡೆಯಲಾಗಿದೆ. ಉಳಿದ ನೋಟುಗಳು, ಶ್ರೀಮಂತರ ಬಳಿಯೇ ಇವೆ. ಹೀಗಾಗಿ ಬಡ ಹಾಗೂ ಸಾಮಾನ್ಯ ವರ್ಗದ ಜನಕ್ಕೆ ಯಾವುದೇ ತೊಂದರೆಯಾಗಲಾರದು.
ಯಾವ ವರ್ಷ ಎಷ್ಟು ನೋಟು ಮುದ್ರಣವಾಗಿತ್ತು..?
೧. 2016-17ರ ಆರ್ಥಿಕ ವರ್ಷ – 353.29 ಕೋಟಿ ರೂಪಾಯಿ ಮೌಲ್ಯ
೨. 2017-18ರ ಆರ್ಥಿಕ ವರ್ಷ – 11.15 ಕೋಟಿ ರೂಪಾಯಿ ನೋಟು
೩. 2018-19ರ ಆರ್ಥಿಕ ವರ್ಷ – 4.66 ಕೋಟಿ ರೂಪಾಯಿ ನೋಟು
೪. 2019-20ರಿಂದ 2000 ರೂ. ನೋಟು ಮುದ್ರಣ ಸ್ಥಗಿತ
2018ರ ಮಾರ್ಚ್ ಅಂತ್ಯದಿಂದ 2000 ರೂಪಾಯಿ ನೋಟು ಚಲಾವಣೆ ಇಳಿಕೆ ಮಾಡುತ್ತಾ ಬರಲಾಯಿತು. 2 ಸಾವಿರ ರೂಪಾಯಿ ಮುಖಬೆಲೆಯ 33,632 ಲಕ್ಷ ನೋಟುಗಳು ಚಲಾವಣೆಯಲ್ಲಿತ್ತು. ಆದ್ರೆ ಅದು 2020ರ ಮಾರ್ಚ್ ಅಂತ್ಯಕ್ಕೆ 27,398 ಲಕ್ಷ ನೋಟುಗಳಿಗೆ ಇಳಿದಿತ್ತು.