BengaluruPolitics

ಮೋದಿ ರೋಡ್‌ ಶೋ ನಡೆಸಿದ ರಸ್ತೆ ಸ್ವಚ್ಛ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರು..!

ಮೈಸೂರು; ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ಮೋದಿಯವರು ಹಲವಾರು ರೋಡ್‌ ಶೋಗಳನ್ನು ನಡೆಸಿದರೂ ವರ್ಕೌಟ್‌ ಆಗಿಲ್ಲ. ಈ ನಡುವೆ ಮೈಸೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಮೋದಿ ರೋಡ್‌ ಶೋಗೆ ವ್ಯಂಗ್ಯ ಮಾಡಿದ್ದಾರೆ. ಮೈಸೂರಿನಲ್ಲಿ ಮೋದಿ ರೋಡ್‌ ಶೋ ಮಾಡಿದ್ದ ರಸ್ತೆಯನ್ನು ಸಗಣಿ ನೀರಿನಿಂದ ಸ್ವಚ್ಛ ಮಾಡಿ ಬಿಜೆಪಿಗೆ ವ್ಯಂಗ್ಯ ಮಾಡಿದ್ದಾರೆ.

ಚುನಾವಣೆ ಸಮಯದಲ್ಲಿ ಪ್ರಧಾನಿ ಮೋದಿಯವರು ದಸರಾ ಅಂಬಾರಿ ಹೋಗುವ ರಾಜಮಾರ್ಗದಲ್ಲಿ ರೋಡ್‌ ಶೋ ನಡೆಸಿದ್ದರು. ಅಂಬಾರಿ ಮೆರವಣಿಗೆ ಹೋಗುವ ದಾರಿಯಲ್ಲಿ ಮೋದಿ ರೋಡ್‌ ಶೋ ನಡೆಸಿದ್ದು ಸರಿಯಲ್ಲ ಎಂದಿರುವ ಕಾಂಗ್ರೆಸ್‌ ಕಾರ್ಯಕರ್ತರು, ಸಗಣಿ ನೀರು ಹಾಕಿ ಸ್ವಚ್ಛ ಮಾಡಿದ್ದಾರೆ. ಜೊತೆಗೆ ಮೋದಿ ಈ ಮಾರ್ಗದಲ್ಲಿ ರೋಡ್‌ ಶೋ ಮಾಡಿದ್ದು, ರಾಜಮನೆತನಕ್ಕೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ.

ಈ ಮಾರ್ಗದಲ್ಲಿ ದಸರಾ ಮೆರವಣಿಗೆ ಬಿಟ್ಟು ದೊಡ್ಡ ಮೆರವಣಿಗೆ ಯಾವುದೂ ನಡೆದಿಲ್ಲ. ಆದ್ರೆ ಮೋದಿಯವರು ಈ ದಾರಿಯಲ್ಲಿ ರೋಡ್‌ ಶೋ ಮಾಡಿ, ನಾಡಹಬ್ಬಕ್ಕೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

Share Post