ಮನೆಯಲ್ಲೇ ಇತ್ತು ಮಗು; ಆದರೆ ಊರೆಲ್ಲ ಹುಡುಕಾಡಿದರು..!
ಬೆಂಗಳೂರು; ಮಗು ಕೊಂಕಳಲ್ಲೇ ಇಟ್ಟುಕೊಂಡು ಊರೆಲ್ಲಾ ಹುಡುಕಾಡಿದರು ಅನ್ನೋ ತರದ ಸ್ಟೋರಿ ಇದು. ಮಗು ಮನೆಯಲ್ಲಿ ಮಲಗಿತ್ತು. ಅದನ್ನು ನೋಡರೇ ಊರಲ್ಲೇ ಹುಡುಕಾಡಿ, ಪೊಲೀಸರು ಕಾಟ ಕೊಟ್ಟ ಘಟನೆ ನಡೆದಿದೆ. ಕೆ.ಆರ್.ಪುರಂನ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ದಂಪತಿ ಹಾಗೂ ಪೊಲೀಸರು ಊರೆಲ್ಲಾ ಹುಡುಕಾಡಿ ಸುಸ್ತಾಗಿ ಮನೆಗೆ ಬಂದಾಗ ಮನೆಯಲ್ಲೇ ಮಗು ಮಲಗಿದ್ದದ್ದು ಕಂಡುಬಂದಿದೆ.
ಮೀನಾ ದಂಪತಿ ಕೆಆರ್ ಪುರಂನ ಜನತಾ ಕಾಲೋನಿಯಲ್ಲಿ ವಾಸವಿದ್ದಾರೆ. ಇವರಿಗೆ ಆರು ವರ್ಷದ ಹೆಣ್ಣು ಮಗಳಿದ್ದು, ಆಕೆ ಮನೆಯಲ್ಲಿ ಕಾಣಿಸಿಲ್ಲ. ಸುತ್ತಮುತ್ತ ಹುಡುಕಾಡಿದರೂ ಸಿಕ್ಕಿಲ್ಲ. ಹೀಗಾಗಿ ಅವರು ಆತಂಕಗೊಂಡು ಊರೆಲ್ಲಾ ಸುತ್ತಿದ್ದಾರೆ. ಕಡೆಗೆ ಪೊಲೀಸರಿಗೂ ದೂರು ಕೊಟ್ಟು ಅವರಿಂದಲೂ ಹುಡುಕಾಡಿಸಿದ್ದಾರೆ. ಆದ್ರೆ ಮಗು ಮಾತ್ರ ಪತ್ತೆಯಾಗಿಲ್ಲ. ಕಡೆದ ಸುಸ್ತಾಗಿ ಮನೆಗೆ ಬಂದಾಗ ಮಗು ಮನೆಯಲ್ಲೇ ಮಲಗಿರುವುದು ಗೊತ್ತಾಗಿದೆ.
ಮನೆಯಲ್ಲಿ ಬಟ್ಟೆಗಳನ್ನು ಗುಡ್ಡೆ ಹಾಕಲಾಗಿತ್ತು. ಮಗು ಅದರ ಮೇಲೆ ಮಲಗಿದ್ದು, ನಿದ್ದೆಯಲ್ಲಿ ಬಟ್ಟೆಗಳ ಅಡಿ ಹೋಗಿದ್ದಾಳೆ. ಇದನ್ನು ಗಮನಿಸದ ಪೋಷಕರು ಆತಂಕಗೊಂಡು ಊರೆಲ್ಲಾ ಸುತ್ತಾಡಿದ್ದಾರೆ. ನಂತರ ಸುಸ್ತಾಗಿ ಮನೆಗೆ ಬಂದ ಮೇಲೆ ತಾಯಿ ಮೀನಾ ಬಟ್ಟೆಗಳ ಬಳಿ ಹುಡುಕಾಡಿದಾಗ ಮಗು ಮಲಗಿರುವುದು ಪತ್ತೆಯಾಗಿದೆ.