BengaluruPolitics

ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.90 ಕೋಟಿ ನಗದು ಜಪ್ತಿ

ಬೆಂಗಳೂರು; ಅಕ್ರಮವಾಗಿ ಯಾವುದೇ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ 1 ಕೋಟಿ 90 ಲಕ್ಷ ರೂಪಾಯಿ ಹಣವನ್ನು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ವಶಪಡಿಸಿಕೊಂಡಿದ್ದಾರೆ. ಮತದಾರರಿಗೆ ಹಂಚಲು ಈ ಹಣ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಶಂಕಿಸಲಾಗಿದೆ.

ಈ ಮಾಹಿತಿ ಮಾಹಿತಿ ಪಡೆದ ಪೊಲೀಸರು ಅಕ್ಕಿಪೇಟೆ ಬಾಲಾಜಿ ಮೆಡಿಕಲ್ಸ್‌ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಹಣ ಪತ್ತೆಯಾಗಿದೆ. ಪೊಲೀಸರು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

 

Share Post