BengaluruCinemaPolitics

ಮತ್ತೆ ಶಿವಣ್ಣ ವಿರುದ್ಧ ಸಂಬರಗಿ ಪೋಸ್ಟ್‌; ಹ್ಯಾಟ್ರಿಕ್‌ ಹೀರೋಗೆ ಹತ್ತು ಪ್ರಶ್ನೆ

ಬೆಂಗಳೂರು; ಸಾಮಾಜಿಕ ಜಾಲತಾಣಗಳಲ್ಲಿ ವಿವಾದಿತ ಪೋಸ್ಟ್‌ಗಳನ್ನು ಆಕುವ ಮೂಲಕ ಪ್ರಚಾರಕ್ಕೆ ಬಂದಿರುವ ಪ್ರಶಾಂತ್‌ ಸಂಬರಗಿ ಎಂಬುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌ ವಿರುದ್ಧ ಮತ್ತೊಂದು ಪೋಸ್ಟ್‌ ಹಾಕಿದ್ದಾರೆ. ಶಿವರಾಜ್‌ಕುಮಾರ್‌ ಅವರು ಮೊನ್ನೆ ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದಕ್ಕೆ ಅವಹೇಳನ ಮಾಡಿ ಸಂಬರಗಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ಇದೀಗ ಅವರು ಇನ್ನೊಂದು ಪೋಸ್ಟ್‌ ಹಾಕಿದ್ದು, ಶಿವಣ್ಣ ಕಾಂಗ್ರೆಸ್‌ ಪರ ಪ್ರಚಾರ ಮಾಡುತ್ತಿರುವುದಕ್ಕೆ ಅವರಿಗೆ ಹತ್ತು ಪ್ರಶ್ನೆ ಕೇಳಿದ್ದಾರೆ.

ಶಿವಣ್ಣ ಹಣ ಪಡೆದು ಪ್ರಚಾರಕ್ಕೆ ಹೋಗಿದ್ದಾರೆ ಎಂದು ಸಂಬರಗಿ ಆರೋಪ ಮಾಡಿದ್ದರು. ಇದಕ್ಕೆ ಶಿವರಾಜ್‌ಕುಮಾರ್‌ ಪ್ರತಿಕ್ರಿಯೆ ನೀಡಿ, ನಾನು ಪ್ರೀತಿಯಿಂದ ಪ್ರಚಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಟಾಂಗ್‌ ಕೊಡುವ ರೀತಿಯಲ್ಲಿ ಪ್ರಶಾಂತ್‌ ಸಂಬರಗಿ ಮತ್ತೊಂದು ಪೋಸ್ಟ್‌ ಹಾಕಿ ಶಿವಣ್ಣಗೆ ಹತ್ತು ಪ್ರಶ್ನೆ ಕೇಳಿದ್ದಾರೆ. ಅವು ಈ ಕೆಳಗಿನಂತೆ ಇವೆ.

ಸಂಬರಗಿಯವರು ಶಿವಣ್ಣಗೆ ಕೇಳಿರುವ ಹತ್ತು ಪ್ರಶ್ನೆಗಳು..
================================
1. ನೀವೇ ಹಿಂದುವಾಗಿ ಭಜರಂಗಿ ಹೆಸರಿನಲ್ಲಿ ನಟಿಸಿ ಕಾಂಗ್ರೆಸ್ ನವರ ಬಜರಂಗದಳದ ನಿಷೇಧದ ಬಗ್ಗೆ ತಮ್ಮ ನಿಲುವು ಏನು..?
2. ಒಂದು ಉತ್ತಮ ಮತ್ತು ಸತ್ಯವಾದ ಚಿತ್ರ ‘ದಿ ಕೇರಳ ಸ್ಟೋರಿ’ ಚಿತ್ರವನ್ನು ನಿಮ್ಮ ಕಾಂಗ್ರೆಸ್ ನಿಷೇಧಿಸುವುದಕ್ಕೆ ಮುಂದಾಗಿದೆ. ನೀವು ಕನ್ನಡದ ಮೇರು ನಟನಾಗಿ ಮತ್ತು ನಿರ್ಮಾಪನಾಗಿ ನಿಮ್ಮ ನಿಲುವೇನು..?
3. ನೀವು ಚಿತ್ರರಂಗದಿಂದ ಬಂದವರು, ಬೆಂಗಳೂರಿನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶಿಸಿದಾಗ ಕಾಂಗ್ರೆಸ್ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆಗ ಏಕೆ ನಿಮ್ಮ ದಿವ್ಯ ಮೌನ..?
4. ಕನ್ನಡಿಗರ ಪರವಾಗಿದ್ದ ಕನ್ನಡ ಡಬ್ಬಿಂಗ್ ವಿರೋಧಿಸಿ ಈಗ ಅನ್ಯ ಭಾಷೆಯ ಚಿತ್ರದಲ್ಲಿ ನಟಿಸುತಿದ್ದೀರಾ.. ಇದು ಸರಿನಾ..?
5. ಡಾ.ರಾಜಕುಮಾರ್ ನಮ್ಮ ಆರಾಧ್ಯ ದೈವ ಮತ್ತು ರಾಜಕೀಯದಿಂದ ದೂರವಾಗಿದ್ದರೂ ಗೋಕಾಕ್ ಚಳವಳಿ ಮತ್ತು ಅವರ ಕನ್ನಡ ಪರ ಹೋರಾಟ ಎಲ್ಲರಿಗೂ ಗೊತ್ತಿರುವ ವಿಚಾರ, ಅವರ ಮಗನಾಗಿ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು..?
6. 2020ರಲ್ಲಿ ಸ್ಯಾಂಡಲ್‌ವುಡ್ ಡ್ರಗ್ ವಿಷಯದಲ್ಲಿ ನೀವು ಏಕೆ ಮೌನವಾಗಿದ್ದಿರಿ? ಕರ್ನಾಟಕವನ್ನು ಮಾದಕ ಮುಕ್ತ ಮಾಡಲು ನಮ್ಮ ಯುವ ಜನರಿಗೆ ತಮ್ಮ ಸಂದೇಶವೇನು..?
7. ಪಿಎಫ್‌ಐ ಮತ್ತು ಜಿಹಾದಿ ಜನರಿಂದ ಆರ್‌ಎಸ್‌ಎಸ್ ಹಿಂದೂ ಕಾರ್ಯಕರ್ತರ ಹತ್ಯೆಗಳ ಬಗ್ಗೆ ನಿಮ್ಮ ನಿಲುವು ಏನು .?
8. ನಿಮ್ಮ ಎಲ್ಲಾ ಚಿತ್ರದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸುವ ಪಾತ್ರ ಮಾಡುವ ತಾವು ಲವ್ ಜಿಹಾದ್ ಮೇಲೆ ನಿಮ್ಮ ನಿಲುವೇನು?
9. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರ ಮತ್ತು ಆದಾಯ ತೆರಿಗೆ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
10. ಮುಸ್ಲಿಂ ಒಲಿಕರಣ ಕಾಂಗ್ರೆಸ್ ಮಂತ್ರವಾಗಿದೆ ಇದರ ಬಗ್ಗೆ ತಮ್ಮ ಅಭಿಪ್ರಾಯ? ಹಿಂದೂಗಳು ನಿಮ್ಮ ಚಿತ್ರವನ್ನು ನೋಡಬಾರದ.?

ಹೀಗಂತ ಪ್ರಶಾಂತ್‌ ಸಂಬರಗಿ ಪ್ರಶ್ನೆಗಳನ್ನು ಕೇಳಿದ್ದಾರೆ.

 

Share Post