ಭಜರಂಗದಳ ವಿಚಾರದಿಂದ ನಷ್ಟವಿಲ್ಲ; ಕಾಂಗ್ರೆಸ್ ಆಂತರಿಕ ಸಮೀಕ್ಷೆ
ಬೆಂಗಳೂರು; ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾದ ಮೇಲೆ ಬಿಜೆಪಿಯವರು ಅದನ್ನೇ ಮುಂದಿಟ್ಟುಕೊಂಡು ಪ್ರಚಾರ ಮಾಡುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಸಂಘಟನೆಗಳನ್ನು ನಿಷೇಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದು, ಅದರಲ್ಲಿ ಭಜರಂಗದಳದ ಹೆಸರನ್ನೂ ಉದಾಹರಣೆಯಾಗಿ ತೆಗೆದುಕೊಂಡಿದೆ. ಇದು ಬಿಜೆಪಿಗೆ ಅಸ್ತ್ರವಾಗಿದೆ. ಆದ್ರೆ, ಈ ವಿವಾದದಿಂದ ಕಾಂಗ್ರೆಸ್‌ಗೆ ಯಾವ ನಷ್ಟವೂ ಇಲ್ಲವಂತೆ. ಹಾಗಂತ ಕಾಂಗ್ರೆಸ್ ಸಮೀಕ್ಷೆಯಲ್ಲಿ ಬಯಲಾಗಿದೆ.
ಈ ಭಜರಂಗದಳದ ವಿಚಾರ ಕರ್ನಾಟಕದಲ್ಲಿ ಕೇವಲ ಏಳು ಪರ್ಸೆಂಟ್ ಮತದಾರರಿಗೆ ಮಾತ್ರ ಗೊತ್ತಿದೆ. ಇದರಲ್ಲಿ ಶೇ.10ಕ್ಕಿಂತ ಕಡಿಮೆ ಮತದಾರರು ಇದನ್ನು ಚುನಾವಣಾ ವಿಷಯವೆಂದು ಭಾವಿಸಿದ್ದಾರೆ. ಆದ್ರೆ ಹಾಗೆ ಭಾವಿಸಿದವರಲ್ಲಿ ಹೆಚ್ಚಿನವರು ಬಿಜೆಪಿ ಮತದಾರರೇ ಆಗಿದ್ದಾರೆ. ಈ ವಿವಾದ ಆಗದಿದ್ದರೂ ಅವರು ಬಿಜೆಪಿಗೇ ಮತ ನೀಡುವವರಾಗಿದ್ದರು. ಆದ್ರೆ, ಈ ವಿಷಯದಿಂದ ಬಿಜೆಪಿ ವಿರೋಧಿ ಮತದಾರರು ಯಾರಿದ್ದಾರೆ..? ಅವರು ಕಾಂಗ್ರೆಸ್‌ಗೆ ಮತ ಹಾಕಲು ಆಸಕ್ತಿ ತೋರಿಸಿದ್ದಾರೆ. ಹೀಗಾಗಿ ಭಜರಂಗದಳದ ವಿಷಯದಿಂದ ಕಾಂಗ್ರೆಸ್‌ಗೆ ಲಾಭವೇ ಆಗಿದೆ ಎಂದು ಹೇಳಲಾಗುತ್ತಿದೆ.
ಕರಾವಳಿ ಭಾಗದ ನಾಲ್ಕು ಕ್ಷೇತ್ರಗಳಲ್ಲಿ ಭಜರಂಗದಳದ ವಿಚಾರ ಕೊಂಚ ಪ್ರಭಾವ ಬೀರಿದೆ. ಇಲ್ಲಿ ಕಾಂಗ್ರೆಸ್‌ಗೆ 1000 ದಿಂದ 1500 ಮತಗಳ ನಷ್ಟವಾಗಬಹುದು ಅಂತ ಕಾಂಗ್ರೆಸ್ ಆಂತರಿಕ ಸಮೀಕ್ಷೆ ಹೇಳಿದೆ. ನಷ್ಟವಾಗುವ ಮತಗಳನ್ನು ಮರಳಿ ಪಡೆಯೋದಕ್ಕೆ ಶ್ರಮಿಸಿ ಎಂದು ಕಾಂಗ್ರೆಸ್ ನಾಯಕರು ಆ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಹೇಳಿದ್ದಾರೆ.
ಇನ್ನು ಬಿಜೆಪಿ ಇದೇ ವಿಷಯದ ಮೇಲೆ ಕೇಂದ್ರೀಕರಿಸುತ್ತಿದೆ. ಇದರಿಂದ ಅದಕ್ಕೆ ಹೆಚ್ಚಿನ ಲಾಭವಾಗದು. ಇದೇ ಸಮಯದಲ್ಲಿ ಕಾಂಗ್ರೆಸ್ ಪೂರ್ಣ ಬಹುಮತ ಪಡೆಯಲು ಏನು ಬೇಕೋ ಅದನ್ನು ಮಾಡಿಕೊಳ್ಳುತ್ತಿದೆ. ಜನರಿಗೆ ಗ್ಯಾರೆಂಟಿ ಕಾರ್ಡ್‌ಗಳನ್ನು ತಲುಪಿಸುತ್ತಾ ಜನರ ಮನಸ್ಸು ಗೆಲ್ಲೋ ಪ್ರಯತ್ನ ಮಾಡುತ್ತಿದೆ.
ಸುಲಭವಾಗಿ ಗೆಲ್ಲುವ ಹಲವು ಕ್ಷೇತ್ರಗಳು ಬಿಟ್ಟು, ಗೆಲ್ಲೋದು ಖಾತ್ರಿ ಇರುವ ಇನ್ನೂ 90ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಾ, ಕಾಂಗ್ರೆಸ್ ಗೆಲ್ಲುವ ತಂತ್ರಗಾರಿಕೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ.