CinemaHealth

Manobala; ವಿಷ್ಣುವರ್ದನ್‌ ಅವರ ಚಿತ್ರ ನಿರ್ದೇಶಿಸಿದ್ದ ಮನೋಬಾಲ ನಿಧನ

ಚೆನ್ನೈ; ಸಾಹಸ ಸಿಂಹ ವಿಷ್ನೂವರ್ಧನ್‌ ಅವರ ಸಿನಿಮಾ ಡಿಸೆಂಬರ್‌ 31 ನಿರ್ದೇಶನ ಮಾಡಿದ್ದ ಖ್ಯಾತ ನಿರ್ದೇಶಕ ಹಾಗೂ ನಟ ನಮೋಬಾಲಾ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಚೆನ್ನೈನಲ್ಲಿ ಸಾವನ್ನಪ್ಪಿದ್ದಾರೆ.

ಮೋನೋಬಾಲ ಅವರು ಹಲವಾರು ದಿನಗಳಿಂದ ಅನಾರೋಗ್ಯಪೀಡಿತರಾಗಿದ್ದರು. ಚೆನ್ನೈನ ಮನೆಯಲ್ಲೇ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಯಕೃತ್ತಿನ ಸಮಸ್ಯೆಯಿಂದ ಅವರು ತೀವ್ರವಾಗಿ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಮನೋಬಾಲ ಅವರು ತಮಿಳುನಲ್ಲಿ ಖ್ಯಾತ ನಿರ್ದೇಶಕರಾಗಿದ್ದರು. ನಟನೆಯಲ್ಲೂ ಅವರು ಸೈ ಅನಿಸಿಕೊಂಡಿದ್ದರು. ಅವರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

Share Post