Bengaluru

ಬೆಂಗಳೂರಲ್ಲಿ ಭೂಕಂಪನವಾಗಿಲ್ಲ; ಶಬ್ದಕ್ಕೆ ಕಾರಣ ಗೊತ್ತಿಲ್ಲ ಎಂದ ವಿಪತ್ತು ಕೇಂದ್ರ

ಬೆಂಗಳೂರು: ಉದ್ಯಾನನಗರಿಯಲ್ಲಿ ಕೇಳಿ ಬಂದ ಶಬ್ದ ಭೂಕಂಪನದಿಂದ ಆಗಿದ್ದಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೆಎಸ್‌ಎನ್‌ಡಿಎಂಸಿ ನಿರ್ದೇಶಕರು, ಬೆಂಗಳೂರಿನಲ್ಲಿ ಭೂಕಂಪ ಆಗಿರುವ ಬಗ್ಗೆ ರಿಕ್ಟರ್‌ ಮಾಪಕದಲ್ಲಿ ವರದಿ ದಾಖಲಾಗಿಲ್ಲ. ಹೀಗಾಗಿ, ಶಬ್ದ ಏಕೆ ಬಂತು ಎಂಬುದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಹಿಂದೆ ಕೂಡಾ ಹಲವು ಭಾರಿ ಬೆಂಗಳೂರಿನಲ್ಲಿ ಭಾರಿ ಶಬ್ದ ಕೇಳಿಸಿತ್ತು. ಅದೇ ರೀತಿಯ ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುತ್ತಮುತ್ತ ಹಾಗೂ ರಾಮನಗರ, ಮಂಡ್ಯ ಭಾಗದಲ್ಲೂ ಸದ್ದು ಕೇಳಿಸಿತ್ತು. ಇದೇ ವೇಳೆ ಭೂಮಿ ಕಂಪಿಸಿದ ಅನುಭವವೂ ಆಯಿತು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಅಧಿಕಾರಿಗಳ ಪ್ರಕಾರ ಇದು ಭೂಕಂಪ ಅಲ್ಲ.

  ರಾಜರಾಜೇಶ್ವರಿ ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೆಪುರ, ಜ್ಞಾನಭಾರತಿನಗರ ಮುಂತಾದ ಕಡೆ ಬೆಳಗ್ಗೆ 11.50 ರಿಂದ 12.15 ವರೆಗೆ ಭೂಮಿ ಕಂಪಿಸಿದ ಅನುಭವವಾಗಿತ್ತು. ಈ ಹಿನ್ನೆಲೆಯಲ್ಲಿ ರಿಕ್ಟರ್‌ ಮಾಪಕದಲ್ಲಿ ಪರಿಶೀಲನೆ ಮಾಡಲಾಗಿದ್ದು, ಭೂಕಂಪನದ ತೀವ್ರತೆ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

Share Post