ರಕ್ತದಲ್ಲಿ ಬರೆದುಕೊಡ್ತಾರಂತೆ; ಇದೇನಿದು ರಕ್ತ ರಾಜಕೀಯ..?
ಬೆಂಗಳೂರು; ಚುನಾವಣಾ ಕಣ ರಂಗೇರಿದೆ.. ಇದರ ಬಿಸಿಯಲ್ಲಿ ರಕ್ತ ರಾಜಕೀಯ ಶುರುವಾಗಿದೆ. ಯಾರು ನೋಡಿದರೂ ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಹೇಳೋದಕ್ಕೆ ಶುರು ಮಾಡಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡುತ್ತಾ ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ರಕ್ತದಲ್ಲಿ ಬೇಕಾದರೆ ಬರೆದುಕೊಡುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಈ ಬಾರಿ 150 ಸ್ಥಾನಗಳಲ್ಲಿ ಗೆಲ್ಲುತ್ತೆ, ಬಿಜೆಪಿಗೆ 40 ಸ್ಥಾನ ಫಿಕ್ಸ್. ನಾನೂ ಈ ಬಗ್ಗೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ.
ಇತ್ತ ಆರೋಗ್ಯ ಸಚಿವ ಸುಧಾಕರ್ ಕೂಡಾ ನಾನೇನೂ ಕಡಿಮೆ ಇಲ್ಲ ಎಂದು ಈ ಬಾರಿ ಬಿಜೆಪಿಯೇ ಅಧಿಕಾರಕ್ಕೆ ಬರೋದು. ನಾನೂ ಕೂಡಾ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದಾರೆ.