BengaluruCrime

ಟೆಕ್ನಾಲಜಿ ಬಳಸಿ ಅಂತಾರಾಜ್ಯ ಕಳ್ಳರಿಗೆ ಕೋಳ

ಬೆಂಗಳೂರು; ಆಂಧ್ರದಿಂದ ಬಸ್‌ನಲ್ಲಿ ಬರುತ್ತಿದ್ದ ಅಂತಾರಾಜ್ಯ ಕಳ್ಳರು, ಬೆಂಗಳೂರಿನಲ್ಲಿ ಬೈಕ್‌ ಕದ್ದು ಸರಗಳ್ಳತನ ಮಾಡುತ್ತಿದ್ದರು. ಹಲವು ತಿಂಗಳುಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಈ ಅಂತಾರಾಜ್ಯ ದರೋಡೆಕೋರರನ್ನು ಕೊನೆಗೂ ಟೆಕ್ನಾಲಜಿ ಬಳಸಿ ಬಂಧಿಸಲಾಗಿದೆ. ದರೋಡೆಕೋರರ ಬಂಧನಕ್ಕೆ ಜಿಪಿಎಸ್‌ ನೆರವಾಗಿದೆ.

ಸೈಯದ್‌ ಬಾಷಾ ಹಾಗೂ ಶೇಕ್‌ ಅಯೂಬ್‌ ಬಂಧಿತರು. ಇವರು ಆಂಧ್ರಪ್ರದೇಶ ಮೂಲದವರಾಗಿದ್ದು, ಬಸ್‌ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಅನಂತರ ಬೈಕ್‌ಗಳನ್ನು ಕದ್ದು, ಅದರ ಮೂಲಕ ಸರಗಳ್ಳತನ ಮಾಡುತ್ತಿದ್ದರು. ಸರಗಳ್ಳತನ ಮುಗಿಸಿದ ನಂತರ ಬೈಕ್‌ಗಳನ್ನು ಅಲ್ಲಿಯೇ ಬಿಟ್ಟು, ಬಸ್‌ನಲ್ಲಿ ಕೆಆರ್‌ ಪುರಂಗೆ ಹೋಗಿ ಅಲ್ಲಿಂದ ಆಂಧ್ರಕ್ಕೆ ತೆರಳುತ್ತಿದ್ದರು. ಅವರು ಆಗಾಗ ಬಟ್ಟೆ, ವೇಷಭೂಷಣ ಬದಲಿಸುತ್ತಿದ್ದರಿಂದ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.

ಹೀಗಿರುವಾಗಲೇ ಕದ್ದ ಬೈಕೊಂದು ಪತ್ತೆಯಾಗಿತ್ತು. ಆ ಬೈಕ್‌ಗೆ ಯಾರಿಗೂ ಗೊತ್ತಿಲ್ಲದಂತೆ ಪೊಲೀಸರು ಜಿಪಿಎಸ್‌ ಅಳವಡಿಸಿದ್ದರು. ೨೦ ದಿನಗಳ ಬಳಿಕ ಬೆಂಗಳೂರಿಗೆ ಬಂದಿದ್ದ ಕಳ್ಳರು, ಅದೇ ಬೈಕ್‌ ತೆಗೆದುಕೊಂಡು ಸುತ್ತಾಡಿದ್ದಾರೆ. ಈ ವೇಳೆ ಜಿಪಿಎಸ್‌ ಟ್ರ್ಯಾಕ್‌ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಿರಿನಗರ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

Share Post