CinemaNationalUncategorized

ಸಿನಿಮಾ ಪೈರಸಿ ತಡೆಗೆ ತಿದ್ದುಪಡಿ ಮಸೂದೆ; ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ; ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023ಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಸಿನಿಮಾಗಳು ಪೈರಸಿ ಆಗುತ್ತಿರುವುದರಿಂದ ನಿರ್ಮಾಪಕರಿಗೆ ಸಾಕಷ್ಟು ಉಂಟಾಗುತ್ತಿತ್ತು. ಈ ಮಸೂದೆಯಿಂದಾಗಿ ಪೈರಸಿ ತಡೆಗಟ್ಟುವುದಕ್ಕೆ ಸಹಾಯವಾಗುತ್ತದೆ.

ಈ ಬಗ್ಗೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾತನಾಡಿದ್ದಾರೆ. ಇಂಟೆರ್ನೆಟ್‌ ಮೂಲಕ ಸಿನಿಮಾಗಳನ್ನು ಪೈರಸಿ ಮಾಡಿ ಅಪ್‌ಲೋಡ್‌ ಮಾಡುವುದನ್ನು ಈ ಮಸೂದೆ ಪರಿಣಾಮಕಾರಿಯಾಗಿ ತಡೆಯುತ್ತದೆ. ಸೆನ್ಸಾರ್‌ ಮಂಡಳಿ ಕೊಡುವ ಪ್ರಮಾಣ ಪತ್ರದಲ್ಲೂ ಬದಲಾವಣೆ ಆಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ಮಸೂದೆಯನ್ನು ಮುಂಬರುವ ಸಂಸತ್ ಕಲಾಪದ ವೇಳೆ ಮಂಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಯಾವುದೇ ವಿವಾದಗಳಿಲ್ಲದೆ ಈ ಸಮೂದೆ ಪಾಸಾಗಲಿದೆ ಎಂದೂ ಅನುರಾಗ್‌ ಠಾಕೂರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share Post