ಚಿಕ್ಕಮಗಳೂರಲ್ಲಿ ಬರೋಬ್ಬರಿ 40 ಕೆಜಿ ಚಿನ್ನಾಭರಣ ವಶ
ಚಿಕ್ಕಮಗಳೂರಲ್ಲಿ ಬರೋಬ್ಬರಿ 40 ಕೆಜಿ ಚಿನ್ನಾಭರಣ ವಶ ಚಿಕ್ಕಮಗಳೂರಲ್ಲಿ ಬರೋಬ್ಬರಿ 40 ಕೆಜಿ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಕಂಟೇನರ್ ಅನ್ನು ಚಿಕ್ಕಮಗಳೂರಿನಲ್ಲಿ ಸ್ಥಾಪಿಸಲಾಗಿರುವ ಚುಣಾವಣಾ ಚೆಕ್ ಪೋಸ್ಟ್‌ನಲ್ಲಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಚಿನ್ನ ಪತ್ತೆಯಾಗಿದೆ.
ಸುಮಾರು 23 ಕೋಟಿ ರೂಪಾಯಿ ಮೊತ್ತದ 40 ಕೆಜಿ ತೂಕದ ಚಿನ್ನಾಭರಣಗಳು ಆ ಕಂಟೇನರ್‌ನಲ್ಲಿ ಸಿಕ್ಕಿವೆ. ಜೊತೆಗೆ ಬೆಳ್ಳಿ ಆಭರಣಗಳು ಅಪಾರ ಪ್ರಮಾಣದಲ್ಲಿ ಪತ್ತೆಯಾಗಿದೆ. ಕಂಟೇನರ್‌ನಲ್ಲಿದ್ದವರು ಚಿನ್ನಾಭರಣಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ. ಶಿವಮೊಗ್ಗದ ಚಿನ್ನದ ಮಳಿಗೆಗಳಿಗೆ ಚಿನ್ನ ಸಪ್ಲೈ ಮಾಡಲು ತೆಗೆದುಕೊಂಡು ಹೋಗಲಾಗುತ್ತಿತ್ತೆಂದು ತಿಳಿದುಬಂದಿದೆ.
ಅಂದಹಾಗೆ, ತೆರಿಗೆ ವಂಚನೆ ಮಾಡಿ ಚಿನ್ನ ಸಾಗಿಸಲಾಗುತ್ತಿದ್ದ ಬಗ್ಗೆ ಅನುಮಾನ. ದಾಖಲೆಗಳಿಲ್ಲದೆ ಚಿನ್ನ ಸಾಗಾಟ ಮಾಡಿ ಮಾರಾಟ ಮಾಡುವುದರಿಂದ ತೆರಿಗೆ ವಂಚನೆ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿನ್ನ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುತ್ತಿದೆ. ತೆರಿಗೆ ಅಧಿಕಾರಿಗಳು ಕೂಡಾ ಈ ಬಗ್ಗೆ ತನಿಖೆ ನಡೆಸಿದ್ದಾರೆ.