ಎಲ್ಲಾ ವರ್ಗಕ್ಕೂ ಸಿಕ್ತು ಬಿಜೆಪಿ ಟಿಕೆಟ್; ಹೊಸ ನಾಯಕರನ್ನು ಬೆಳೆಸಲು ಬಿಜೆಪಿ ಮುಂದಡಿ
ಬೆಂಗಳೂರು; ಬಿಜೆಪಿ ವರಿಷ್ಠರು ಕಳೆದ ನಾಲ್ಕು ದಿನಗಳಿಂದ ಅಳೆದೂತೂಗಿ ಕೊನೆಗೂ 189 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಪ್ರಕಟ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಹೊಸಬರಿಗೆ ಹೆಚ್ಚು ಮಣೆ ಹಾಕಲಾಗಿದೆ. 52 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ. ಇಷ್ಟೇ ಅಲ್ಲ, ಎಲ್ಲಾ ವರ್ಗಕ್ಕೂ ಟಿಕೆಟ್ ಸಿಗುವಂತೆ ನೋಡಿಕೊಳ್ಳಲಾಗಿದೆ. ಯುವಕರು, ಹಿರಿಯರು, ವೃತ್ತಿಪರರು ಹೀಗೆ ಎಲ್ಲಾ ರೀತಿಯವರಿಗೂ ಟಿಕೆಟ್ ನೀಡಲಾಗಿದೆ.
ಇನ್ನು ಈ ಬಾರಿ ಯುವಕರನ್ನು ನಾಯಕರನ್ನು ಬೆಳೆಸುವ ನಿಟ್ಟಿನಲ್ಲಿ ಬಿಜೆಪಿ ಚಿಂತನೆ ನಡೆಸಿದಂತೆ ಕಾಣುತ್ತಿದೆ. ಈ ಕಾರಣಕ್ಕಾಗಿ ಹಲವು ನಾಯಕರ ಮಕ್ಕಳಿಗೆ ಟಿಕೆಟ್ ನೀಡಿದೆ. ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನೊಂದೆಡೆ ವಿಜನಗರ ಕ್ಷೇತ್ರದಿಂದ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಸಿಂಗ್ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಉಮೇಶ್ ಕತ್ತಿಯವರ ಪುತ್ರ ನಿಖಿಲ್ ಕತ್ತಿಗೆ ಹುಕ್ಕೇರಿ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಇದಲ್ಲದೆ ಹಲವು ಯುವಕರಿಗೆ ಟಿಕೆಟ್ ನೀಡಲಾಗಿದ್ದು, ಭವಿಷ್ಯದ ನಾಯಕರನ್ನಾಗಿ ಬೆಳೆಸಲು ಬಿಜೆಪಿ ಮುಂದಡಿ ಇಟ್ಟಿದೆ.
ಕೆಲವರು ತಮ್ಮ ಬದಲಾಗಿ ಮಕ್ಕಳಿಗೆ ಟಿಕೆಟ್ ಕೇಳಿದ್ದರು. ಆದ್ರೆ ಅದನ್ನು ನಿರಾಕರಿಸಲಾಗಿದೆ. ಹೊಸಕೋಟೆ ಕ್ಷೇತ್ರದಿಂದ ತಮ್ಮ ಬದಲಾಗಿ ತಮ್ಮ ಮಗನಿಗೆ ಟಿಕೆಟ್ ಕೊಡಿ ಅಂತ ಎಂಟಿಬಿ ನಾಗರಾಜ್ ಕೇಳಿದ್ದರು. ಆದ್ರೆ ಹೈಕಮಾಂಡ್ ಎಂಟಿಬಿಯವರಿಗೇ ಟಿಕೆಟ್ ನೀಡಿದೆ. ಇನ್ನು ವಿ.ಸೋಮಣ್ಣ ಅವರ ಪುತ್ರನಿಗೂ ಟಿಕೆಟ್ ಕೇಳಲಾಗಿತ್ತು. ಆದ್ರೆ ಆ ಬಗ್ಗೆ ಇನ್ನೂ ಫೈನಲ್ ಆಗಿಲ್ಲ.
ಇನ್ನು ಹಿರಿಯ ಶಾಸಕರಿಗೆ ಟಿಕೆಟ್ ನೀಡೋದಿಲ್ಲ ಎಂದು ಹೇಳಲಾಗಿತ್ತು. 70 ವರ್ಷ ದಾಟಿದವರನ್ನು ಹೊರಗಿಡಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ ಕೊನೆ ಗಳಿಗೆಯಲ್ಲಿ ಹಿರಿಯರಿಗೂ ಟಿಕೆಟ್ ನೀಡಲಾಗಿದೆ.
ಟಿಕೆಟ್ ಪಡೆದ ಹಿರಿಯರು
ವಿಶ್ವೇಶ್ವರ ಹೆಗಡೆ ಕಾಗೇರಿ
ಎಸ್.ಸುರೇಶ ಕುಮಾರ್
ತಿಪ್ಪಾರೆಡ್ಡಿ
ಬಿ.ಸಿ. ನಾಗೇಶ್
ನಿವೃತ್ತ ಅಧಿಕಾರಿಗಳಿಗೆ ಮಣೆ
ಚಾಮರಾಜಪೇಟೆ – ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್
ಕೊರಟಗೆರೆ – ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್
ಮಧುಗಿರಿ – ಸ್ವಯಂನಿವೃತ್ತಿ ಪಡೆದ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್
52 ಹೊಸ ಮುಖಗಳು ಯಾರು ಯಾರು..?
=========================
ಶಿಕಾರಿಪುರ – ಬಿ.ವೈ. ವಿಜಯೇಂದ್ರ
ವಿಜಯನಗರ – ಸಿದ್ಧಾರ್ಥ ಸಿಂಗ್
ಹುಕ್ಕೇರಿ-ನಿಖಿಲ್ ಕತ್ತಿ
ರಾಮದುರ್ಗ – ಎಸ್ ಸರ್ ಚಿಕ್ಕರೇವಣ್ಣ
ಸಿರಗುಪ್ಪ – ಸೋಮಲಿಂಗಪ್ಪ
ಕುಂದಾಪುರ – ಕಿರಣ್ ಕುಮಾರ್
ಬೆಳಗಾವಿ ಉತ್ತರ – ರವಿ ಪಾಟೀಲ
ಹೊಸದುರ್ಗ – ಲಿಂಗಮೂರ್ತಿ
ಸವದತ್ತಿ – ರತ್ನ ಮಹಾಮನಿ
ಶಿರಹಟ್ಟಿ – ಚಂದ್ರು ಲಮಾಣಿ
ಚಿತ್ತಾಪುರ – ಮಣಿಕಂಠ
ಚಿಂಚೊಳ್ಳಿ – ಅವಿನಾಶ್ ಜಾಧವ್
ಚಾಮರಾಜಪೇಟೆ – ಭಾಸ್ಕರ್ ರಾವ್
ಹಡಗಲಿ – ಕೃಷ್ಣ ನಾಯಕ್
ಹರಿಹರ – ಬಿ.ಪಿ ಹರೀಶ್
ಉಡುಪಿ – ಯಶ್ಪಾಲ್ ಸುವರ್ಣ
ಕುಣಿಗಲ್ – ಕೃಷ್ಣ ಕುಮಾರ್
ಶಿರಾ – ರಾಜೇಶ್ ಗೌಡ
ಬ್ಯಾಟರಾಯನಪುರ – ತಮ್ಮೇಶ್ ಗೌಡ
ಪುಲಿಕೇಶಿನಗರ – ಮುರುಳಿ
ಶಾಂತಿ ನಗರ – ಶಿವಕುಮಾರ್
ಸರ್ವಜ್ಞ ನಗರ – ಪದ್ಮನಾಭ ರೆಡ್ಡಿ
ಶಾಂತಿ ನಗರ – ಶಿವಕುಮಾರ್
ಶಿವಾಜಿ ನಗರ – ಎನ್ ಚಂದ್ರ
ಜಯನಗರ – ಸಿ ಕೆ ರಾಮಮೂರ್ತಿ
ಮಂಡ್ಯ – ಅಶೋಕ್ ಜೈರಾಮ್
ಮಧುಗಿರಿ – ಎಲ್ .ಸಿ ನಾಗರಾಜ್
ಬಾಗೇಪಲ್ಲಿ – ಎಸ್ ಸಿ ಮುನಿರಾಜ್
ಮುಳಬಾಗಿಲು – ಸೀಗೇಹಳ್ಳಿ ಸುಂದರ್
ಪಿರಿಯಾಪಟ್ಟಣ – ವಿಜಯಶಂಕರ್
ಆನೆಕಲ್ – ಹುಲ್ಲಹಳ್ಳಿ ಶ್ರೀನಿವಾಸ್
ರಾಮನಗರ – ಗೌತಮ ಗೌಡ
ದೊಡ್ಡಬಳ್ಳಾಪುರ – ಧೀರಜ್
ನಾಗಮಂಗಲ – ಸುಧಾ ಶಿವರಾಂ
ಮಾಗಡಿ – ಪ್ರಸಾದ್ ಗೌಡ
ಹನೂರು – ಪ್ರೀತಂ ನಾಗಪ್ಪ
ಪುತ್ತೂರು – ಆಶಾ ತಿಮ್ಮಪ್ಪ
ಅರಕಲಗೂಡು – ಯೋಗಾ ರಮೇಶ್
ಸಕಲೇಶ ಪುರ – ಸಿಮೆಂಟ್ ಮಂಜು
ಚಾಮುಂಡೇಶ್ವರಿ – ಕವೀಶ್ ಗೌಡ
ಸುಳ್ಯ – ಭಾಗೀರಥಿ ಮುರುಳ್ಯ
ಜಾತಿವಾರು ಟಿಕೆಟ್ ಹಂಚಿಕೆ ಹೇಗೆ..?
========================
ಇತರೆ ಹಿಂದುಳಿದ ವರ್ಗ (OBC) – 32
ಪರಿಶಿಷ್ಟ ಜಾತಿ – 30
ಪರಿಶಿಷ್ಟ ಪಂಗಡ – 16
ಮಹಿಳೆಯರು – 8
ಹೊಸ ಅಭ್ಯರ್ಥಿಗಳು – 52
ವೃತ್ತಿಪರರಿಗೂ ಸಿಕ್ತು ಬಿಜೆಪಿ ಟಿಕೆಟ್
========================
ಸ್ನಾತಕೋತ್ತರ ಪದವೀಧರರು – 31
ವಕೀಲರು – 5
ವೈದ್ಯರು – 9
ನಿವೃತ್ತ ಐಎಎಸ್ ಅಧಿಕಾರಿ – 1
ನಿವೃತ್ತ ಐಪಿಎಸ್ ಅಧಿಕಾರಿ -1
ನಿವೃತ್ತ ಸರ್ಕಾರಿ ನೌಕರರು -3
ಸಾಮಾಜಿಕ ಕಾರ್ಯಕರ್ತರು – 8