Cinema

ಕೇವಲ ೨೦ದಿನದಲ್ಲೇ ಅಣ್ಣಾತೆ ಓಟಿಟಿಯಲ್ಲಿ ಲಭ್ಯ !

ಬೆಂಗಳೂರು : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಸಿನಿಮಾ ಅಣ್ಣಾತೆ ಬಿಡುಗಡೆಯಾಗಿ ಕೇವಲ ೨೦ ದಿನ ಕಳೆದಿದೆ ಅಷ್ಟೆ. ಕಳೆದ ನವೆಂಬರ್‌ ೪ಕ್ಕೆ ತೆರೆಕಂಡಿದ್ದ ಈ ಚಿತ್ರ ಈಗ ನೆಟ್‌ಫ್ಲಿಕ್ಸ್‌ ಅಲ್ಲಿ ಲಭ್ಯವಿದೆ. ಪಂಚ ಭಾಷೆಗಳಲ್ಲಿ ಈ ಸಿನಿಮಾ ನೋಡಬಹುದಾಗಿದೆ.

ಅಮೇರಿಕಾ, ಶ್ರೀಲಂಕಾ, ಮಲೇಶಿಯಾ ಸೇರಿ ಅನೇಕ ಕಡೆ ಏಕಕಾಲದಲ್ಲೇ ತೆರೆಕಂಡಿದ್ದ ಈ ಚಿತ್ರ ಓಟಿಟಿಯಲ್ಲಿ ಲಭ್ಯವಾಗಿರೋದನ್ನ ಕೆಲವರು ಟೀಕಿಸಿದ್ದಾರೆ ಕೂಡ.

ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳ್ಲಲಿ ತೆರೆಕಂಡಿದ್ದ ಅಣ್ಣಾತೆ ಸಿನಿಮಾದಲ್ಲಿ ರಜನಿಕಾಂತ್‌ ಜೊತೆ ನಯನಾ ತಾರಾ, ಕೀರ್ತಿ ಸುರೇಶ್‌ ಕೂಡ ಅಭಿನಯಿಸಿದ್ದರು.

Share Post