BengaluruPolitics

ಗುಜರಾತ್‌ ಸಿಎಂ ಆಗಿದ್ದಾಗ ಮೋದಿ ನಂದಿನಿ ಮುಗಿಸಲು ಸುಪಾರಿ ಕೊಟ್ದ್ದಟಿದ್ರು; ಹೆಚ್ಡಿಕೆ

ಬೆಂಗಳೂರು; ಅಮುಲ್‌ ಮೂಲಕ ನಂದಿನಿ ಬ್ರಾಂಡ್‌ ಮುಗಿಸಲು ಯತ್ನಿಸುತ್ತಿರುವುದೇ ಇದೇ ಮೊದಲಲ್ಲ. ನರೇಂದ್ರ ಮೋದಿಯವರು ಗುಜರಾತ್‌ ಸಿಎಂ ಆಗಿದ್ದಾಗಲೇ ಇದಕ್ಕೆ ಸುಪಾರಿ ಕೊಡಲಾಗಿತ್ತು. ಆಗಲೇ ರಾಜ್ಯದಲ್ಲಿ ಅಮುಲ್‌ ಪಾರ್ಲರ್‌ಗಳ ಸ್ಥಾಪನೆಗೆ ಪರ್ಯತ್ನಿಸಲಾಗಿತ್ತು ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, 2008ರಲ್ಲೇ ಕನ್ನಡಿಗರ ಮೇಲೆ ಅಮುಲ್ ಅನ್ನು ಹೇರಿ, ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು. ಎಂದು ಹೇಳಿದ್ದಾರೆ.

ಹೆಚ್ಡಿಕೆ ಮಾಡಿರುವ ಟ್ವೀಟ್‌ಗಳ ಯಥಾವತ್‌ ಸಾರಾಂಶ ಇಲ್ಲಿದೆ;

ಟ್ವೀಟ್‌-೧
ಇನ್ನೊಬ್ಬರು; @CTRavi_BJP ; ಈ ಮಹಾಶಯರು, ಮೋದಿ ಅವರ ಬಗ್ಗೆ ಟೀಕೆ ಮಾಡಿದರೆ ಅವರ ಎತರಕ್ಕೆ ಏರಲು ಸಾಧ್ಯವಿಲ್ಲ ಎಂದು ಆಣಿಮುತ್ತು ಉದುರಿಸಿದ್ದಾರೆ. ನಾವು ಅವರ ಮಟ್ಟಕ್ಕೆ ಏರುವುದೂ ಇಲ್ಲ, ಸಿ.ಟಿ.ರವಿ ಅವರ ಮಟ್ಟಕ್ಕೆ ಇಳಿಯುವುದೂ ಇಲ್ಲ. ಆದರೆ, ಕರ್ನಾಟಕವನ್ನು ಗುಜರಾತಿಗಳಿಗೆ ಒತ್ತೆ ಇಡುವ ಪಾಪದ ಕೆಲಸವನ್ನಂತು ನಾವು ಮಾಡುತ್ತಿಲ್ಲ.

ಟ್ವೀಟ್‌-೨
ಅಸಲಿ ವಿಷಯ ಅದಲ್ಲ! ಈಗಲ್ಲ, ಸನ್ಮಾನ್ಯ ಶ್ರೀ @narendramodi ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಲೇ ಕೆಎಂಎಫ್ ಅನ್ನು ಮುಗಿಸಲು ಸುಪಾರಿ ಕೊಡಲಾಗಿತ್ತು!! ಅಂದರೆ 2008ರಲ್ಲೇ ಕನ್ನಡಿಗರ ಮೇಲೆ ಅಮುಲ್ ಅನ್ನು ಹೇರಿ, ನಂದಿನಿಯ ಕತ್ತು ಹಿಸುಕುವ ಕರಾಳ ಪ್ರಯತ್ನ ನಡೆದಿತ್ತು.

ಟ್ವೀಟ್‌-೩
ಆಗ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಅಮುಲ್ ಮಾರಾಟ ಘಟಕ ಸ್ಥಾಪಿಸಲು ಹೊರಟಿತ್ತು ಅಂದಿನ ರಾಜ್ಯ @BJP4Karnataka ಸರಕಾರ. ಅಂದರೆ, 15 ವರ್ಷಗಳ ಹಿಂದೆಯೇ ಅಮುಲ್ ಅನ್ನು ಉದ್ಧರಿಸಲು, ನಂದಿನಿಯ ಕತ್ತು ಕತ್ತರಿಸಲು ಬಿಜೆಪಿ ಹೊರಟಿತ್ತು!!

ಟ್ವೀಟ್‌-೩
ಅಂದು ಅಮುಲ್‌ ಘಟಕದ ಬಗ್ಗೆ @JanataDal_S ಪಕ್ಷವು ಭಾರೀ ವಿರೋಧ ವ್ಯಕ್ತಪಡಿಸಿತ್ತು, ಕೆಎಂಎಫ್ʼನ ಅಂದಿನ ಅಧ್ಯಕ್ಷರಾಗಿದ್ದ @hd_revanna ಅವರು, “ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಅಮುಲ್ ಹಾಲು ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ” ಎಂದು ಕಡ್ಡಿತುಂಡು ಮಾಡಿದಂತೆ ಹೇಳಿದ್ದರು.

ಟ್ವೀಟ್‌-೪
ಅಂದು ಬಿಜೆಪಿಗರು ಮೋದಿ ಅವರನ್ನು ಮೆಚ್ಚಿಸಲು ಅಮುಲ್ ಪರ ವಕಾಲತ್ತು ವಹಿಸಿ,ನಂದಿನಿಯನ್ನು ಮುಗಿಸಲು ಹೊರಟಿದ್ದರು. ಅಂದಿನ ಮುಖ್ಯಮಂತ್ರಿಗಳೂ ಸೇರಿ ಬಿಜೆಪಿ ಮುಂಚೂಣಿ ನಾಯಕರು ಅಮುಲ್ ಪರ ಬ್ಯಾಟ್ ಬೀಸಿದ್ದರು.ಈಗ ಪಾತ್ರಗಳು ಬದಲಾಗಿವೆ. @CTRavi_BJP, @mla_sudhakar, @drashwathcn ಇತರರು ರಂಗದ ಮೇಲಿದ್ದಾರಷ್ಟೇ.

Share Post